ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ರಸ್ತೆಯಲ್ಲೇ ಕೊಳಚೆ ನೀರು: ರೋಗ ಹರಡುವ ಭೀತಿ!

ಉಡುಪಿ : ಮಣಿಪಾಲದ ವಾಟರ್ ಟ್ಯಾಂಕ್ ಸಮೀಪ ಇರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಬಟ್ಟೆ ತೊಳೆದ ನೀರು, ರಾಷ್ಟ್ರೀಯ ಹೆದ್ದಾರಿಯ ತನಕ ಹರಿದು ಬರುತ್ತಿದ್ದು, ಇದರಿಂದ ಪರಿಸರದಲ್ಲಿ ರೋಗ ಹರಡುವ ಭೀತಿ ಎದುರಾಗಿದೆ.

ಇದೇ ರೀತಿ 80 ಬಡಗುಬೆಟ್ಟು ಗ್ರಾಮ ಪಂಚಾಯತ್ಗೆ ಒಳಪಟ್ಟಿರುವ ಶಾಂತಿನಗರ ಮುಖ್ಯರಸ್ತೆಯಲ್ಲಿಯೂ ಕೊಳಚೆ ನೀರು ಹರಿಯುತ್ತಿದೆ.ಇದರಿಂದಾಗಿ ಮಲೇರಿಯಾ, ಡೆಂಗ್ಯೂ ಮೊದಲಾದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಆದುದರಿಂದ ತಕ್ಷಣ ಸಂಬಂಧಪಟ್ಟ ಸ್ಥಳಿಯಾಡಳಿತಗಳು ಸಮಸ್ಯೆಯನ್ನು ಬಗೆಹರಿಸಬೇಕೆಂದು ನಾಗರಿಕ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.

Edited By : Somashekar
Kshetra Samachara

Kshetra Samachara

19/09/2022 07:17 pm

Cinque Terre

7.8 K

Cinque Terre

0

ಸಂಬಂಧಿತ ಸುದ್ದಿ