ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಭೂ ಪರಿಹಾರ ನೀಡದ ಮನಪಾ ಚರಾಸ್ತಿ ಜಪ್ತಿಗೆ ಆದೇಶ

ಮಂಗಳೂರು: ನಗರದ ಪಂಪ್‌ವೆಲ್‌ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಬಸ್‌ ತಂಗುದಾನಕ್ಕೆ ಭೂ ಸ್ವಾಧೀನ ಮಾಡಿರುವ ಜಮೀನಿಗೆ ಪರಿಹಾರದ ಹಣ ನೀಡದ ಹಿನ್ನೆಲೆಯಲ್ಲಿ ಮಂಗಳೂರು ಮನಪಾ ಚರಾಸ್ತಿ ಜಪ್ತಿಗೆ ಮಂಗಳೂರು ಜಿಲ್ಲಾ ನ್ಯಾಯಾಲಯವು ಆದೇಶ ಮಾಡಿದೆ.

ನ್ಯಾಯಾಲಯದ ಅಮೀನ್‌ ನ್ಯಾಯಾಲಯದ ಜಪ್ತಿ ಆದೇಶವನ್ನು ಜಾರಿಗೊಳಿಸಲು ಮಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ಬುಧವಾರ ತೆರಳಿದ್ದಾರೆ. ಆದರೆ ಪಾಲಿಕೆಯ ವಿನಂತಿಯ ಮೇರೆಗೆ ಪರಿಹಾರ ಪಾವತಿಗೆ ಅಕ್ಟೋಬರ್ 25ರವರೆಗೆ ಕಾಲಾವಕಾಶ ನೀಡಲಾಗಿದೆ.

ಪಂಪ್‌ವೆಲ್‌ ನಲ್ಲಿ ಬಸ್‌ನಿಲ್ದಾಣ ನಿರ್ಮಾಣಕ್ಕೆ ಪಾಲಿಕೆಯು 7 ಎಕರೆ 23.5 ಸೆಂಟ್ಸ್‌ ಭೂಮಿಯನ್ನು 2008ರಲ್ಲಿ ಸ್ವಾಧೀನಪಡಿಸಿತ್ತು. 33 ಕುಟುಂಬಗಳು ಈ ಯೋಜನೆಗೆ ಜಮೀನು ನೀಡಿತ್ತು. ಆದರೆ ಸರಕಾರ ನಿಗದಿಪಡಿಸಿದ ಭೂ ಪರಿಹಾರದ ಮೊತ್ತಕ್ಕೆ 16 ಕುಟುಂಬಗಳು ತಕರಾರು ಎತ್ತಿ ಹೆಚ್ಚಿನ ಪರಿಹಾರಕ್ಕಾಗಿ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಸಂಬಂಧ 16 ವ್ಯಾಜ್ಯಗಳ ವಿಚಾರಣೆ ನಡೆಯುತ್ತಿದ್ದು ಈ ಪ್ರಕರಣಗಳಿಗೆ ಪಾಲಿಕೆ ತಡೆಯಾಜ್ಞೆಯನ್ನು ತಂದಿತ್ತು.

ಆದರೆ, ತಡೆಯಾಜ್ಞೆಯ ಅವಧಿ ಮುಗಿದ 1 ಪ್ರಕರಣದಲ್ಲಿ ನ್ಯಾಯಾಲಯವು ಮಂಗಳೂರು ಮನಪಾ ಚರಾಸ್ತಿಗಳ ಜಪ್ತಿಗೆ ಆದೇಶ ಮಾಡಿದೆ. ಜಪ್ತಿಗೆ ಆದೇಶವಾಗಿರುವ ಪ್ರಕರಣದಲ್ಲಿ ಪಾಲಿಕೆಯು ಭೂಮಾಲೀಕರಿಗೆ 3.48 ಕೋಟಿ ರೂ. ಪರಿಹಾರವನ್ನು ಪಾವತಿಸಬೇಕಿದೆ.

Edited By : Nagaraj Tulugeri
Kshetra Samachara

Kshetra Samachara

12/10/2022 10:30 pm

Cinque Terre

6.37 K

Cinque Terre

0

ಸಂಬಂಧಿತ ಸುದ್ದಿ