ಉಡುಪಿ: ಉಡುಪಿಯಲ್ಲಿ ಇವತ್ತು ಪೊಲೀಸರಿಂದ ಬಂಧಿತರಾದ ನಾಲ್ವರು ಪಿಎಫ್ಐ ಕಾರ್ಯಕರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ನಾಲ್ವರನ್ನು ಉಡುಪಿ, ಕುಂದಾಪುರ ಮತ್ತು ಬೈಂದೂರು ತಹಶೀಲ್ದಾರ್ ಮುಂದೆ ಹಾಜರುಪಡಿಸಲಾಯಿತು.
ಈ ಪೈಕಿ ರಜಬ್ ಗಂಗೊಳ್ಳಿ ಮತ್ತು ಆಶಿಕ್ ಕೋಟೇಶ್ವರಗೆ ಅಕ್ಟೋಬರ್ 2ರವರೆಗೆ ಮತ್ತು ಇಲಿಯಾಸ್ ಹೂಡೆ ಮತ್ತು ಅಶ್ರಫ್‌ಗೆ ಸೆ.29ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಯಿತು. ಇವತ್ತು ಮುಂಜಾನೆ ಜಿಲ್ಲೆಯ ಜಿಲ್ಲೆಯ ನಾಲ್ಕು ಠಾಣೆಗಳ ವ್ಯಾಪ್ತಿಯಲ್ಲಿ ಇವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಖಚಿತವಾಗಿ ಇವರನ್ನು ಯಾವ ಪ್ರಕರಣಗಳಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಮುಂಜಾಗೃತಾ ಕ್ರಮವಾಗಿ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Kshetra Samachara
27/09/2022 12:04 pm