ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಮುರುಕಲು ಗುಡಿಸಲಿನಲ್ಲೇ ಒಂಟಿ ವೃದ್ಧೆಯ ವಾಸ: ಬೇಕಿದೆ ಸಹಾಯದ ಹಸ್ತ

ಬೈಂದೂರು: ಬೈಂದೂರು ತಾಲೂಕಿನ ನಾಡಾ ಗ್ರಾಮ ತೆಂಕಬೈಲು ಗೋಳಿಹಕ್ಲು ನಿವಾಸಿ ಚಂದು ಪೂಜಾರ್ತಿ (73) ಎಂಬ ವೃದ್ಧೆ ಬೆಚ್ಚಗಿನ ಗೂಡಿಗಾಗಿ ದಶಕಗಳಿಂದ ಕಾದು ಕುಳಿತಿದ್ದಾರೆ. ಸರ್ಕಾರ ಮನೆ, ಶೌಚಾಲಯ ಮತ್ತಿತರ ಸೌಲಭ್ಯಗಳಿಗೆ ಹತ್ತಾರು ಯೋಜನೆಗಳನ್ನು ಜಾರಿಗೆ ತಂದರೂ ಅದು ಇನ್ನೂ ಚಂದು ಪೂಜಾರ್ತಿಯವರಿಗೆ ತಲುಪಿಲ್ಲ. ಚಂದು ಪೂಜಾರ್ತಿ ಕೂಡು ಕುಟುಂಬದಲ್ಲಿ ಜನಿಸಿದ್ದರೂ ಬದುಕಿಗೆ ಕೂಲಿ ಕೆಲಸವೇ ಆಧಾರ. ಒಬ್ಬ ಸಹೋದರ, ಮೂವರು ಸಹೋದರಿಯರಿದ್ದಾರೆ. ಆದರೆ ಚಂದು ಪೂಜಾರ್ತಿ ಬಳಿ ಸಂಪತ್ತು ಎಂದು ಇರುವುದು ಒಂದು ಮುರುಕು ಮನೆ ಮಾತ್ರ.

20 ವರ್ಷಗಳ ಹಿಂದೆ ತನ್ನವರಿಂದ ಬೇರಾಗಿ ಬೇರೊಂದು ಮನೆ ಸ್ವಂತ ಪರಿಶ್ರಮದಿಂದ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಸೋರಿ ಮನೆಯ ನೆಲ ಒದ್ದೆಯಾಗುತ್ತದೆ. ಅಂಗೈ ಅಗಲದ ಜಾಗದಲ್ಲಿ ಚಂದು ಪೂಜಾರ್ತಿ ಬದುಕು ಕಳೆಯುತ್ತಿದ್ದಾರೆ. ಮನೆಯ ವಿದ್ಯುತ್ ಸಂಪರ್ಕ ಕಿತ್ತುಹೋಗಿ ಈಗ ಮೇಣದ ಬತ್ತಿಯ ಬೆಳಕಿನಲ್ಲಿ ರಾತ್ರಿ ಕಳೆಯಬೇಕು.

ನನಗೆ ಐಶ್ವರ್ಯ, ಅರಮನೆ ಬೇಕು ಎಂದು ಕೇಳುತ್ತಿಲ್ಲ. ಒಂದು ಸೂರು ಸಿಕ್ಕರೆ ಸಾಕು. ಹೊಸ ಮನೆ ಮಾಡಿ ನಾಲ್ಕು ದಿನ ಅದರಲ್ಲಿ ಇರಬೇಕು ಅನ್ನೋದೇ ನನ್ನ ಆಸೆ. ಆಮೇಲೆ ಏನೇ ಆದರೂ ಚಿಂತೆಯಿಲ್ಲ. ಈ ಮನೆ ನಾನೇ ಕಟ್ಟಿಕೊಂಡಿದ್ದು. ಮಲಗಿ ಬೆನ್ನು ನೋವು ಇರುವುದರಿಂದ ಕೂಲಿ ಮಾಡುವುದಕ್ಕೆ ಆಗುತ್ತಿಲ್ಲ. ಪುಟ್ಟದೊಂದು ಮನೆ ಬೇಕು ಎನ್ನುತ್ತಾರೆ ಈ ವೃದ್ಧೆ. ಇವರಿಗೆ ಸಹಾಯ ಮಾಡಬಯಸುವವರು ಈ ಕ್ಯೂಆರ್ ಕೋಡ್ ಸ್ಕ್ಯಾನರ್ ಬಳಸಿ ಸಹಾಯ ಮಾಡಬಹುದು.

Edited By : Shivu K
PublicNext

PublicNext

09/10/2022 09:29 am

Cinque Terre

36.41 K

Cinque Terre

1

ಸಂಬಂಧಿತ ಸುದ್ದಿ