ಬ್ರಹ್ಮಾವರ: ಸಂಕಷ್ಟದ ಸಮಯದಲ್ಲಿ ಧಾವಿಸಿ ಬರುವ ಅಟೋ ಚಾಲಕರದ್ದು ವಿಶಿಷ್ಟ ಸೇವಾ ಕಾಯಕ.ಆದರೆ ಬ್ರಹ್ಮಾವರ ಬಳಿಯ ಬೈಕಾಡಿ ಗಾಂಧಿನಗರದ ಅಟೋ ಚಾಲಕ ಅಣ್ಣಪ್ಪನವರ ಮಾನವೀಯ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಬೈಕಾಡಿ ಆಟೋ ಸ್ಟಾಂಡ್ ನಲ್ಲಿರುವ ಇವರು ,ಆಸುಪಾಸಿನ ಯಾರೇ ಗರ್ಭಿಣಿಯರಿದ್ದರೂ ,ಅವರನ್ನು ಅಗತ್ಯ ಬಿದ್ದಾಗ ಉಚಿತವಾಗಿ ವೈದ್ಯರಲ್ಲಿಗೆಕರೆದೊಯ್ಯುತ್ತಾರೆ.ಗರ್ಭಿಣಿ ಮಹಿಳೆಯರು ತಪಾಸಣೆ ಅಥವಾ ಹೆರಿಗೆಗೆ ಹೋಗುವುದಿದ್ದರೆ ಇವರದು ಬಾಡಿಗೆ ರಹಿತ ಉಚಿತ ಸೇವೆ.
ಬ್ರಹ್ಮಾವರ - ಬೈಕಾಡಿ ಪರಿಸರದ ಹಲವು ಗರ್ಭಿಣಿಯರು ಇವರ ಅಟೋದಲ್ಲಿ ಪ್ರಯಾಣ ಮಾಡಿ ಉಚಿತ ಸೇವೆಯನ್ನುಪಡೆದುಕೊಂಡು ಕೃತಜ್ಞತೆ ಸಲ್ಲಿಸಿದ್ದಾರೆ.ಆಟೋ ಚಾಲಕರು ಹಾಗೆ ಹೀಗೆ ಎಂದು ಬಯ್ಯುವ ಜನರೇ ಹೆಚ್ಚು. ಮಾತ್ರವಲ್ಲ ,ಒಬ್ಬ ಆಟೋ ಚಾಲಕ ತಪ್ಪು ಮಾಡಿದಾಗ, ಇಡೀ ಆಟೋ ಚಾಲಕರ ಸಮೂಹಕ್ಕೇ ಬಯ್ಯುವವರೇ ಹೆಚ್ಚು.ಅಂಥದ್ದರಲ್ಲಿ ಅಣ್ಣಪ್ಪ ಅವರು ಮಾನವೀಯ ಸೇವೆ ಮೂಲಕ ಗಮನ ಸೆಳೆದಿದ್ದಾರೆ.
PublicNext
17/06/2022 08:30 am