ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹತ್ತು ವರ್ಷಗಳ ಹೋರಾಟದ ಫಲ,ಸರಕಾರಿ ಬಸ್ ಬರ್ತಿದ್ದಂತೆಯೇ ಊರ ನಾಗರಿಕರ ವಿಜಯೋತ್ಸವ...

ಮಂಗಳೂರು: ಆ ಊರಿನ ಜನರು ಹತ್ತು ವರ್ಷಗಳಿಂದ ನಡೆಸುತ್ತಿದ್ದ ಹೋರಾಟ ,ಒತ್ತಾಯದ ಫಲವಾಗಿ ಇದೀಗ ಸರಕಾರಿ ಬಸ್ಸಿನ ಅಗಮನವಾಗಿದೆ.

ಮಂಗಳೂರಿನಿಂದ ನಾಟೆಕಲ್ ಮೊಂಟೆಪದವು ಮಾರ್ಗವಾಗಿ ಮುಡಿಪುವಿಗೆ ಸರಕಾರಿ ಬಸ್ ಒದಗಿಸುವಂತೆ ಕಳೆದ 10ವರ್ಷಗಳಿಂದ ಈ ಭಾಗದ ಜನರು ಒತ್ತಾಯಿಸುತ್ತ ಬಂದಿದ್ದಾರೆ. ಈ ಬಗ್ಗೆ ಹಲವು ಬಾರಿ ಇಲ್ಲಿನ ಸಂಘ ಸಂಸ್ಥೆಗಳು ಹೋರಾಟವನ್ನು ಮಾಡುತ್ತಾ, ಸಂಬಂಧಪಟ್ಟವರಿಗೆ ಮನವಿಯನ್ನೂ ಸಲ್ಲಿಸುತ್ತಾ ಬಂದಿದ್ರು .

ಈ ಭಾಗದಲ್ಲಿ ಕೇವಲ ಖಾಸಗಿ ಬಸ್ಸುಗಳು ಮಾತ್ರ ಸಂಚರಿಸುತ್ತಿದ್ದು ಅವುಗಳು ಸದಾ ತುಂಬಿ ತುಳುಕುತಿತ್ತು ಇದರಿಂದಾಗಿ ಈ ಭಾಗದ ವಿದ್ಯಾರ್ಥಿಗಳು ಮತ್ತು ವಯಸ್ಕರಿಗೆ ಬಸ್ಸಿನಲ್ಲಿ ಸಂಚರಿಸಲು ಹರಸಾಹಸ ಪಡಬೇಕಿತ್ತು. ಇಲ್ಲಿನ ನಾಗರಿಕರ ನಿರಂತರ ಹೋರಾಟ ಫಲವಾಗಿ ಇಂದು ಮೊಂಟೆಪದವು ಮಾರ್ಗವಾಗಿ ಸರಕಾರಿ ಬಸ್ಸು ಆಗಮನವಾಗಿದೆ.

ಬಸ್ ಬರುತ್ತಿದ್ದಂತೆಯೇ ಇಲ್ಲಿನ ನಾಗರಿಕರು ಪಟಾಕಿ ಸಿಡಿಸಿ ,ಸಂಭ್ರಮಿಸಿದ್ರು ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪದಾಧಿಕಾರಿ ರಝಕ್ ಮೊಂಟೆಪದವು, ಹೋರಾಟ ಸಮಿತಿಯ ಮುಖ್ಯಸ್ಥರಾದ ಅಝೀಜ್ ಮೊಂಟೆಪದವು, ರಿಮಿಯಾಜ್ ಸಾಮಾನಿಗೆ , ರಫೀಕ್ ವನದಡಿ, ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಆಸೀಫ್ SI ,ಶಾಕಿರ್ MK. ಹಿರಿಯ ಹೋರಾಟಗಾರರಾದ ಆಲಿಕುಂಜಿ ಮೊಂಟುಗೊಳಿ, ಕಲಾಯಿ ಕುಂಜಿ, ಸಂಶುದ್ದೀನ್ Ut, ಬಾಳೆಪುಣಿ ಗ್ರಾಮ ಪಂಚಾಯತ್ ಸದಸ್ಯರಾದ ಹನೀಫ್ H ಕಲ್ಲು, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸರೋಜಿನಿ, ಕಮಲಾ ಮತ್ತು ಮೊಂಟೆಪದವಿನ ಸುತ್ತಮುತ್ತಲಿರುವ ನಾಗರಿಕರು ಉಪಸ್ಥಿತಿತರಿದ್ರು.

Edited By : Manjunath H D
Kshetra Samachara

Kshetra Samachara

28/08/2021 12:18 pm

Cinque Terre

11.28 K

Cinque Terre

0