ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬ್ಲೂಫ್ಲ್ಯಾಗ್ ಬೀಚ್‍ನಲ್ಲಿ ಕಡಲಾಮೆ ಸಂತತಿ ರಕ್ಷಣೆ ಕುರಿತು ಮಾಹಿತಿ ಶಿಬಿರ

ಪಡುಬಿದ್ರೆ: ಪರಿಸರ ಸಂರಕ್ಷಣೆಯಲ್ಲಿ ಆಮೆಗಳು ಪ್ರಮುಖಪಾತ್ರ ವಹಿಸುತ್ತವೆ ಎಂದು ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ಕುಂದಾಪುರದ ಎಫ್‍ಎಸ್‍ಎಲ್ ಸರಕಾರೇತರ ಸಾಮಾಜಿಕ ಸಂಸೆಯ ರಾಕೇಶ್ ಸೋನ್ಸ್ ಹೇಳಿದರು.

ಅವರು ಇಂದು ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಬೀಚ್‍ನಲ್ಲಿ ನಡೆಸಲಾದ ಕಡಲಾಮೆ ಸಂತತಿಯ ರಕ್ಷಣೆ ಬಗೆಗಿನ ಮಾಹಿತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಕಡಲಿನಾಳದಲ್ಲಿನ ಆಮೆ ಸಂತತಿಗೂ ಮನುಷ್ಯ ಬಯಸುವ ಮೀನಿನ ಸಂಪತ್ತಿಗೂ ಅವಿನಾಭವ ಸಂಬಂಧವಿದೆ. ಕಡಲಾಮೆ ಸಂತತಿಯನ್ನು ನಾವು ರಕ್ಷಿಸಿದಲ್ಲಿ ಮೀನುಗಳ ಸಂಪತ್ತು ಸಮುದ್ರದಲ್ಲಿ ಹೆಚ್ಚುತ್ತದೆ. ಮೀನಿನ ಮರಿಗಳು ಇವುಗಳಿಂದಲೇ ರಕ್ಷಿಸಲ್ಪಡುತ್ತವೆ. ಇತ್ತೀಚಿನ ದಿನಗಳಲ್ಲಿ ಕಡಲಾಮೆಯ ಸಂತತಿ ತೀರಾ ಕಡಿಮೆಯಾಗುತ್ತಿದೆ. ಇದರಿಂದ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ.

ಆಮೆಗಳು 250ರಿಂದ 300 ವರ್ಷಗಳ ಕಾಲ ಜೀವಿಸುತ್ತವೆ. ಅಕ್ಟೋಬರ್‍ನಿಂದ ಜನವರಿ ತಿಂಗಳಲ್ಲಿ ಮೊಟ್ಟೆ ಇಡಲು ಕಡಲ ತೀರಕ್ಕೆ ಆಗಮಿಸುತ್ತದೆ ಎಂದರು.

ಕಡಲಾಮೆಯ ರಕ್ಷಣೆಯ ಬಗ್ಗೆ ಸ್ಥಳೀಯರಿಗೆ ಹಾಗೂ ಬ್ಲೂಫ್ಲ್ಯಾಗ್ ಬೀಚ್‍ನ ಸಿಬ್ಬಂದಿಗಳಿಗೆ ಮಾಹಿತಿ ಶಿಬಿರ ನಡೆಯಿತು.

Edited By :
Kshetra Samachara

Kshetra Samachara

26/11/2020 06:55 pm

Cinque Terre

32.84 K

Cinque Terre

0

ಸಂಬಂಧಿತ ಸುದ್ದಿ