ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು : " ಗೋಳಿಹೊಳೆ '' ಯಲ್ಲಿ ರೋಗಿಗಳ ಗೋಳು ಕೇಳುವವರಿಲ್ಲ

ಬೈಂದೂರು : ಬಡವರು ಹಾಗೂ ಅನಕ್ಷರಸ್ಥರ ಜೀವದೊಂದಿಗೆ ಚಲ್ಲಾಟವಾಡುತ್ತಿರುವ ಅಕ್ರಮ ಕ್ಲಿನಿಕ್ ಗಳು ಹಗಲು ದರೋಡೆ ಮಾಡುತ್ತಿದ್ದರೂ ಜಿಲ್ಲಾ ವೈದ್ಯಾಧಿಕಾರಿಗಳು ಮೌನಕ್ಕೆ ಶರಣು ಹೋಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.

ಕುಂದಾಪುರ ಹಾಗೂ ಬೈಂದೂರ ಭಾಗದಲ್ಲಿ ಈ ಅಕ್ರಮ ಕ್ಲಿನಿಕ್ ಗಳಿಗೆ ಲಂಗು ಲಗಾಮು ಇಲ್ಲದಂತಾಗಿದೆ. ಆಯುರ್ವೇದ ವೈದ್ಯರು ಅಲೋಪಥಿಕ್ ಔಷಧಿ ಮಾತ್ರೆ ನೀಡುವುದು ಮಾಮೂಲು. ಆದರೆ ಗೋಳಿಹೊಳೆ ಗ್ರಾಮದಲ್ಲಿ ಬಿಎಎಮ್ಎಸ್ ಡಾಕ್ಟರ್ ತಮ್ಮ ಕ್ಲಿನಿಕ್ ದಲ್ಲಿ ಡ್ರಗ್ ಕಂಟ್ರೋಲರ್ ಲೈಸೆನ್ಸ್ ಇಲ್ಲದೆ ಅಕ್ರಮವಾಗಿ ಫಾರ್ಮಸಿ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಈ ಬಗ್ಗೆ ಅಲ್ಲಿಯ ಸಾರ್ವಜನಿಕರು ಹಿರಿಯ ವೈದ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರು ಕ್ರಮ ಮಾತ್ರ ಜರುಗದೆ ಇರುವುದು ನೋಡಿದರೆ ಭ್ರಷ್ಟಾಚಾರದ ವಾಸನೆ ಹರಡ ತೊಡಗಿದೆ.

ಹೌದು ಕುಂದಾಪುರ ಹಾಗೂ ಬೈಂದೂರು ಭಾಗದ ಆದೆಷ್ಟೋ ಡಾಕ್ಟರ್ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.ಆದರೆ ಇಂಥ ಹೊಣೆಗೇಡಿ ಡಾಕ್ಟರ್ ಗಳಿಂದ ಒಳ್ಳೆಯ ಡಾಕ್ಟರ್ ಗಳಿಗೂ ಸಹ ಕೆಟ್ಟ ಹೆಸರು ಎಂದು ಹೇಳಬಹುದು.

ಸಾಕ್ಷ್ಯಾಧಾರ ಹೊರತಾಗಿಯೂ ಸಾರ್ವಜನಿಕರ ಮಾಹಿತಿ ಮೆರೆಗೆ ಲೈಸನ್ಸ್ ಇಲ್ಲದೆ ದಾಸ್ತಾನು ಇಟ್ಟುಕೊಂಡು ಚಿಕಿತ್ಸೆ ನೀಡುತ್ತಿರುವ ವೈದ್ಯರ ಮೇಲೆ ಯಾವುದೆ ರೀತಿಯ ಕಾನೂನು ಕ್ರಮ ತೆಗೆದುಕೊಳ್ಳದೆ ರಾಜಾರೋಷವಾಗಿ ಕ್ಲಿನಿಕ್ ನಡೆಸಲು ಅನುಮತಿ ನೀಡಿದ್ದು ಯಾವ ನ್ಯಾಯ ? ಒಂದು ವೇಳೆ ಯಾವುದಾದರೂ ಔಷಧಿಯಿಂದ ರೋಗಿಗಳಿಗೆ ಅಪಾಯವಾದರೆ ಯಾರು ಹೊಣೆ?

ಗೋಳಿಹೊಳೆಯಲ್ಲಿ ಉಪ ಆರೋಗ್ಯ ಕೇಂದ್ರ ಇದ್ದರು ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲದಿರುವುದು ಖಾಸಗಿ ವೈದ್ಯರಿಗೆ ವರವಾಗಿದೆ.

ಉಪ ಆರೋಗ್ಯ ಕೇಂದ್ರಕ್ಕೆ ಸರ್ಕಾರಿ ವೈದ್ಯರನ್ನು ನೇಮಕ ಮಾಡಬೇಕು,ನಕಲಿ ವೈದ್ಯರ ಹಾವಳಿಯನ್ನು ನಿಯಂತ್ರಿಸಬೇಕೆಂದು ಗೊಳಿಹೊಳೆ, ಏಳಜಿತ್, ಕಾಲ್ತೋಡು ಗ್ರಾಮಸ್ಥರು ಶಾಸಕರನ್ನು ಆಗ್ರಹಿಸಿದ್ದಾರೆ

Edited By : Shivu K
Kshetra Samachara

Kshetra Samachara

13/02/2022 01:33 pm

Cinque Terre

22.65 K

Cinque Terre

0

ಸಂಬಂಧಿತ ಸುದ್ದಿ