ಉಡುಪಿ: ಕೊನೆಗೂ ಜಿಲ್ಲೆಯ ನೂತನ ಸರಕಾರಿ ಜಿಲ್ಲಾಸ್ಪತ್ರೆ ಕಾಮಗಾರಿ ಆರಂಭವಾಗಿದೆ. ನಗರದ ಅಜ್ಜರಕಾಡು ಎಂಬಲ್ಲಿ 110 ಕೋಟಿ ರುಪಾಯಿ ವೆಚ್ಚದಲ್ಲಿ 250 ಬೆಡ್ ಗಳ ಆಸ್ಪತ್ರೆ ನಿರ್ಮಾಣ ಆಗಲಿದ್ದು, ಅಡಿಪಾಯದ ಕೆಲಸ ಆರಂಭವಾಗಿದೆ. ಹೊಸ ಆಸ್ಪತ್ರೆ ಕಟ್ಟಡದ ಪಕ್ಕದಲ್ಲಿ ಇರುವ ಹಳೇ ಕಟ್ಟಡಗಳನ್ನು ನೆಲಸಮ ಮಾಡಿ, ಆ ಜಮೀನಿನಲ್ಲೂ ಆಸ್ಪತ್ರೆ ನಿರ್ಮಾಣ ಆಗಲಿದೆ. ಒಂದೂವರೆ ವರ್ಷದ ಅವಧಿಯಲ್ಲಿ ನೂತನ ಆಸ್ಪತ್ರೆ ಸೇವೆಗೆ ಸಿದ್ಧವಾಗಲಿದೆ ಎಂದು ಶಿಲಾನ್ಯಾಸ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು.ಅದರಂತೆ ಕಾಮಗಾರಿ ಭರದಿಂದ ಸಾಗಿದೆ.ಜಿಲ್ಲೆ ರಚನೆಯಾಗಿ ಎರಡು ದಶಕಗಳ ಬಳಿಕ ಪೂರ್ಣಪ್ರಮಾಣದ ಜಿಲ್ಲಾಸ್ಪತ್ರೆ ನಿರ್ಮಾಣಗೊಳ್ಳುತ್ತಿರುವುದು ಜಿಲ್ಲೆಯ ಜನರಿಗೆ ಖುಷಿ ನೀಡಿದೆ.
Kshetra Samachara
29/11/2021 01:45 pm