ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರೋಗಿಗಳ ಮಾನಸಿಕ ಆರೋಗ್ಯಕ್ಕೆ ಸಮುದಾಯ ವಾಚನಾಲಯ ಸಹಕಾರಿ; ನಳೀನ್ ಕುಮಾರ್ ಕಟೀಲ್

ಮಂಗಳೂರು: ರೋಗಿಗಳ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯಕ್ಕಾಗಿ ಓದುವ ಹವ್ಯಾಸ ಉತ್ತಮ. ಈ ನಿಟ್ಟಿನಲ್ಲಿ ಸಮುದಾಯ ವಾಚನಾಲಯ ಸಹಕಾರಿಯಾಗಲಿದೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ತಿಳಿಸಿದರು.

ವೆನ್ಲಾಕ್ ಜಿಲ್ಲಾಸ್ಪತ್ರೆ, ಭಾರತೀಯ ರೆಡ್ ಕ್ರಾಸ್, ಯುವ ರೆಡ್ ಕ್ರಾಸ್ ಘಟಕ ಮಂಗಳೂರು ವಿವಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿ ಆರಂಭಗೊಂಡ ಸಮುದಾಯ ವಾಚನಾಲಯದ ನವೀಕೃತ ಕೊಠಡಿಯ ಉದ್ಘಾಟನೆ ಮತ್ತು ಪತ್ರಿಕಾ ವಿತರಣಾ ವಾಹಕ (ಟ್ರಾಲಿ ) ಸಮರ್ಪಣಾ ಕಾರ್ಯಕ್ರಮದ ನೆರವೇರಿಸಿ ಮಾತನಾಡುತ್ತಿದ್ದರು.

ವೆನ್ಲಾಕ್ ಆಸ್ಪತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರತಿದಿನ ನೂರಾರು ರೋಗಿಗಳು ಆಗಮಿಸುತ್ತಿದ್ದಾರೆ. ಅವರಿಗೆ ಸಹಾಯಕರಾಗಿಯೂ ಸಾಕಷ್ಟು ಮಂದಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ ಅವರಿಗೆ ಓದಲು ಪುಸ್ತಕ, ಪತ್ರಿಕೆ ಓದಲು ಸಮು ದಾಯ ವಾಚನಾಲಯದ ಮೂಲಕ ಮಾಡುವ ಯೋಜನೆ ಶ್ಲಾಘನೀಯ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

Edited By : Abhishek Kamoji
Kshetra Samachara

Kshetra Samachara

10/10/2022 09:02 pm

Cinque Terre

20.25 K

Cinque Terre

2

ಸಂಬಂಧಿತ ಸುದ್ದಿ