ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ತೆಂಗಿನಮರ ಏರುವ ಕಾರ್ಮಿಕರಿಗೆ ಸುವರ್ಣ ಅವಕಾಶ; ಕೇರಾ ಸುರಕ್ಷಾ ವಿಮಾ ಯೋಜನೆ

ಕಾರ್ಕಳ: ತೆಂಗು ಬೆಳೆಗಾರರು ಇತ್ತೀಚಿನ ದಿನಗಳಲ್ಲಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ತೆಂಗಿನ ಮರ ಏರುವ ಕಾರ್ಮಿಕರ ಸಮಸ್ಯೆ ಬಹಳ ಮುಖ್ಯವಾಗಿದೆ. ಇದರಿಂದಾಗಿ ಸಕಾಲದಲ್ಲಿ ತೆಂಗಿನಕಾಯಿಗಳನ್ನು ಕೊಯ್ಲು ಮಾಡಲು ಹಾಗೂ ಮರಗಳಿಗೆ ತಗಲುವ ಕೀಟ ಬಾಧೆಯನ್ನು ನಿಯಂತ್ರಿಸಲು ತುಂಬಾ ತೊಂದರೆಯಾಗುತ್ತಿದೆ .ಈ ನಿಟ್ಟಿನಲ್ಲಿ ತೆಂಗು ಅಭಿವೃದ್ಧಿ ಮಂಡಳಿಯು ತೆಂಗಿನ ಮರ ಏರುವ ಕಾರ್ಮಿಕರಿಗೆ ವಿಮಾ ಪಾಲಿಸಿಯನ್ನು ಜಾರಿಗೆ ತಂದಿದೆ.

ಏಕೆಂದರೆ ತೆಂಗಿನ ಮರ ಏರುವ ಕೆಲಸವು ಅತ್ಯಂತ ಅಪಾಯಕಾರಿ ಉದ್ಯೋಗವಾಗಿದ್ದು ಈ ಹಿನ್ನೆಲೆಯಲ್ಲಿ ಕಾರ್ಮಿಕರು ಈ ಕೆಲಸಕ್ಕೆ ಮುಂದಾಗುತ್ತಿಲ್ಲ ಇದಲ್ಲದೇ ನೀರ ತಂತ್ರಜ್ಞರು ಕೂಡ ಮರದಿಂದ ಬಿದ್ದು ದುರ್ಮರಣ ಹೊಂದಿರುವ ಸಾಕಷ್ಟು ಘಟನೆಗಳು ನಡೆದಿದೆ. ಇದನ್ನೆಲ್ಲಾ ಮನಗಂಡು ತೆಂಗು ಅಭಿವೃದ್ದಿ ಮಂಡಳಿಯು ತೆಂಗಿನ ಮರ ಇರುವ ಕಾರ್ಮಿಕರ ಸುರಕ್ಷತೆಗಾಗಿ 5 ಲಕ್ಷ ರೂಪಾಯಿಗಳ ವಿಮಾ ಪರಿಹಾರ ಯೋಜನೆಯನ್ನು ಜಾರಿಗೊಳಿಸಿದೆ.

ಕಾರ್ಮಿಕರು ಕೇವಲ ಆಧಾರ್ ಕಾರ್ಡ್ ಹಾಗೂ ವಾರ್ಷಿಕ 99 ರೂಪಾಯಿಗಳ ವಿಮಾವಂತಿಗೆಯನ್ನು ತೆಂಗು ಅಭಿವೃದ್ಧಿ ಮಂಡಳಿಗೆ ಪಾವತಿಸಿ 5 ಲಕ್ಷ ರೂಪಾಯಿಗಳ ವಿಮಾ ಪಾಲಿಸಿಯನ್ನು ಪಡೆಯಬಹುದಾಗಿದೆ ವಿನಯ ಪಾಲಿಸಿಯನ್ನು ಪಡೆದ ನಂತರ ಅದನ್ನು ಸುರಕ್ಷಿತವಾಗಿ ಇರಿಸಿಕೊಂಡು ಪ್ರತಿ ವರ್ಷ 99 ರೂಪಾಯಿ ಪಾವತಿಸಿ ನವೀಕರಣ ಮಾಡಬೇಕು ಮರ ಏರುವ ಸಂದರ್ಭದಲ್ಲಿ ಅಪಘಾತದಿಂದ ಮರಣ ಹೊಂದಿದ್ದಲ್ಲಿ ಮೃತನ ಕುಟುಂಬಕ್ಕೆ 5 ಲಕ್ಷ ಪರಿಹಾರ ಸಿಗಲಿದೆ.

ಒಂದುವೇಳೆ ಮರದಿಂದ ಬಿದ್ದು ಭಾಗಶಃ ಅಂಗವೈಕಲ್ಯಕ್ಕೆ ಒಳಗಾದರೆ 2.5 ಲಕ್ಷ ಪರಿಹಾರ ಸಿಗಲಿದೆ. ಒಳ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡರೆ 1 ಲಕ್ಷ ಚಿಕಿತ್ಸಾ ವೆಚ್ಚ ಹಾಗೂ ಆಂಬುಲೆನ್ಸ್‌ 3 ಸಾವಿರ ರೂಪಾಯಿ ಸಿಗಲಿದೆ. ಅರ್ಜಿ ಹಾಗೂ ಮಾಹಿತಿಗಾಗಿ ನಿಮ್ಮ ಸಮೀಪದ ತೋಟಗಾರಿಕಾ ಇಲಾಖೆ ಸಂಪರ್ಕಿಸಬಹುದು. ಈ ಕುರಿತು ಕಾರ್ಕಳ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ ಬಿ.ವಿ ಮಾಹಿತಿ ನೀಡಿದ್ದು, ಈ ಯೋಜನೆಯ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದ್ದಾರೆ

Edited By :
Kshetra Samachara

Kshetra Samachara

21/08/2022 06:51 pm

Cinque Terre

17.85 K

Cinque Terre

2

ಸಂಬಂಧಿತ ಸುದ್ದಿ