ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ನೆರೆಹಾನಿ ಪ್ರದೇಶಕ್ಕೆ ಡಿಸಿ ಭೇಟಿ-10,000 ರೂ. ತಕ್ಷಣ ಪರಿಹಾರ ಘೋಷಣೆ!

ಕಲ್ಲುಗುಂಡಿ: ನೆರೆ ನೀರು ನುಗ್ಗಿ ಕಲ್ಲುಗುಂಡಿ ಪ್ರದೇಶಕ್ಕೆ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಭೇಡಿ ನೀಡಿದರು.

ಅವರೊಂದಿಗೆ ಪುತ್ತೂರು ಎ.ಸಿ. ಗಿರೀಶ್ ನಂದನ್, ತಹಶೀಲ್ದಾರ್ ಕು.ಅನಿತಾಲಕ್ಷ್ಮಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ಹಾಗೂ ವಿವಿಧ ಡಧಿಕಾರಿಗಳು ಇದ್ದರು. ಜಿಲ್ಲಾಧಿಕಾರಿಗಳು ಸುಳ್ಯ ,ಕಡಬ ಭಾಗದಲ್ಲಿ ಕಳೆದ 24 ಗಂಟೆಯಲ್ಲಿ 28 ಸೆ.ಮೀ.ಗಿಂತಲೂ ಜಾಸ್ತಿ ಮಳೆಯಾಗಿದ್ದು, ಹಲವು ಭಾಗಗಳಲ್ಲಿ ಹಾನಿ ಸಂಭವಿಸಿದೆ.

ಬಹಳಷ್ಟು ಮನೆ, ಅಂಗಡಿಗಳು, ಸೇತುವೆ ಮತ್ತು ರಸ್ತೆಗಳಿಗೆ ಹಾನಿ ಸಂಭವಿಸಿದೆ. ಮನೆ ಹಾನಿಯಾದ ಮತ್ತು ಪಾತ್ರೆ , ಬಟ್ಟೆ ಬರೆ ಹಾನಿಯಾದವರಿಗೆ ತಕ್ಷಣ ರೂ.10,000 ಚೆಕ್ ನೀಡಲು ತಹಶೀಲ್ದಾರ್ ಅವರಿಗೆ ಹೇಳಿದ್ದೇನೆ. ಮನೆ ದುರಸ್ತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ನಿರ್ದೇಶನದಂತೆ ಪರಿಹಾರ ವಿತರಣೆ ಮಾಡಲು ತಿಳಿಸಿದ್ದೇನೆ. ತೊಂದರೆಗೊಳಗಾದವರನ್ನು ಸಾಂತ್ವನ ಕೇಂದ್ರಕ್ಕೆ ಸ್ಥಳಾಂತರಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಅಂಗಡಿಗಳಿಗೂ ಬಹಳಷ್ಟು ಹಾನಿಯಾಗಿ ನಷ್ಟ ಸಂಭವಿಸಿದ್ದು, ಅವರ ನಷ್ಟ ನೋಡಿಕೊಂಡು ಪರಿಹಾರಕ್ಕಾಗಿ ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.

ಸಂಪಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಕೆ. ಹಮೀದ್, ಸುಳ್ಯ ನ.ಪಂ. ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ನ.ಪಂ. ಸದಸ್ಯ ರಾಧಾಕೃಷ್ಣ ರೈ ಬೂಡು,ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಶ್ರೀಮತಿ ಗೀತಾಶೇಖರ್ ಉಳುವಾರು, ಸುನಿಲ್ ಕೇರ್ಪಳ, ಸಂಪಾಜೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ ಮತ್ತಿತರರು ಇದ್ದರು.

Edited By :
Kshetra Samachara

Kshetra Samachara

02/08/2022 10:20 pm

Cinque Terre

17.01 K

Cinque Terre

0

ಸಂಬಂಧಿತ ಸುದ್ದಿ