ಕಿನ್ನಿಗೋಳಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ನಡುಗೋಡು ಗ್ರಾಮದ ನೆಲ್ಲಿಮಾರ್ ಮತ್ತು ಕಿಂಡಿ ಅಣೆಕಟ್ಟು ಸಮೀಪ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಸ್ಥಳೀಯರ ಆರೋಪದ ಹಿನ್ನೆಲೆಯಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯಿಶ್ ಚೌಟ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಮಾತನಾಡಿ ಅವರು, ಕಿನ್ನಿಗೋಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕಿಲೆಂಜೂರು ನಡುಗೋಡು ಮತ್ತು ಕೊಂಡೆ ಮೂಲ ಗ್ರಾಮದಲ್ಲಿ ನಂದಿನಿ ನದಿ ಹರಿಯುತ್ತಿದ್ದು ಕಳೆದ ಬೇಸಿಗೆ ಹಾಗೂ ಮಳೆಗಾಲದಲ್ಲಿ ನಿರಂತರವಾಗಿ ರಾತ್ರಿಯ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ, ಅದರಲ್ಲೂ ನಡುಗೋಡು ಗ್ರಾಮದ ನೆಲ್ಲಿಮಾರ್ ಮತ್ತು ಕಿಂಡಿ ಅಣೆಕಟ್ಟು ಸಮೀಪ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದೇ ಅಲ್ಲದೆ ಮರಳುಗಾರಿಕೆಯಿಂದ ಕಾಂಕ್ರೆಟ್ ರಸ್ತೆ ನಾಶವಾಗಿದ್ದು ಈ ಬಗ್ಗೆ ಅನೇಕ ಬಾರಿ ಅಕ್ರಮ ಮರಳುಗಾರಿಕೆ ನಡೆಸುವವರಿಗೆ ಮೌಖಿಕ ಎಚ್ಚರಿಕೆ ನೀಡಿದ್ದರೂ ಮರಳುಗಾರಿಕೆ ನಿಂತಿಲ್ಲ,
ಕೂಡಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಕ್ರಮ ಮರಳುಗಾರಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯಿಶ್ ಚೌಟ ತಿಳಿಸಿದ್ದಾರೆ.
Kshetra Samachara
26/07/2022 10:53 pm