ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಸರೋವರವಾದ ಪರಿಸರ; ನೆರೆ ನೀರಲ್ಲೇ ಮೃತದೇಹವನ್ನು ಹೊತ್ತೊಯ್ದರು!

ಕಾಪು: ಜಿಲ್ಲೆಯಲ್ಲಿ ಕೆಲದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿದೆ. ಈ ಮಳೆಯಿಂದಾಗಿ ಹಲವೆಡೆ ಹಾನಿ ಸಂಭವಿಸಿದ್ದರೆ ಕಾಪು ತಾಲೂಕಿನಲ್ಲಿ ಮೃತದೇಹವನ್ನು‌ ಜನರು ನೆರೆನೀರಲ್ಲೇ ಸಾಗಿಸಿದ ಮನ ಕಲಕುವ ಘಟನೆ ನಡೆದಿದೆ.

ಮಳೆ ಕಾರಣ ಎಲ್ಲೆಡೆ ಕೃತಕ ನೆರೆ ಸೃಷ್ಟಿಯಾಗಿತ್ತು. ಕಾಪು ತಾಲೂಕು ಕೋಟೆ ಗ್ರಾಪಂ ವ್ಯಾಪ್ತಿಯ ಮಟ್ಟು ದೇವರಕುದ್ರು ಎಂಬಲ್ಲಿ ಶುಕ್ರವಾರ ಮನೆಯೊಂದರಲ್ಲಿ ಸಾವು ಸಂಭವಿಸಿದೆ. ದೇವರಕುದ್ರುಗೆ ಸಂಪರ್ಕ ರಸ್ತೆ ಇದ್ದರೂ ರಸ್ತೆ, ತೋಟದಲ್ಲಿ ನೆರೆ ನೀರು ತುಂಬಿದ್ದ ಕಾರಣದಿಂದಾಗಿ ಆ್ಯಂಬುಲೆನ್ಸ್ ಮೃತರ ಮನೆಯವರೆಗೆ ತಲುಪಲು ಸಾಧ್ಯವಾಗಿಲ್ಲ.

ಹೀಗಾಗಿ ಮಟ್ಟು ದೇವರಕುದ್ರು ಬೊಮ್ಮನ್ ತೋಟದ ರಾಮಪ್ಪ ಕುಂದರ್ ಅವರ ಪತ್ನಿ ಬೇಬಿ ಪೂಜಾರಿ ಅವರ ಪಾರ್ಥಿವ ಶರೀರವನ್ನು ಸುಮಾರು ಅರ್ಧ ಕಿ.ಮೀ. ದೂರದವರೆಗೆ ಹೊತ್ತುಕೊಂಡೇ ಸಾಗಿಸಲಾಯಿತು. ಬಳಿಕ ಆ್ಯಂಬುಲೆನ್ಸ್ ಮೂಲಕ ಸಾಗಿಸಿ ಕೋಟೆ ಗ್ರಾಪಂನ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಶವ ಸಂಸ್ಕಾರ ನಡೆಸಲಾಯಿತು.

Edited By :
PublicNext

PublicNext

03/07/2022 09:42 am

Cinque Terre

67.12 K

Cinque Terre

0

ಸಂಬಂಧಿತ ಸುದ್ದಿ