ಮಂಗಳೂರು : ನಗರದಿಂದ ರಾಷ್ಟ್ರದ ರಾಜಧಾನಿ ಡೆಲ್ಲಿ ನಡುವೆ ನೇರ ವಿಮಾನಯಾನ ಸೇವೆ ಪ್ರಾರಂಭಗೊಂಡಿದೆ.
ಮಂಗಳೂರು - ಡೆಲ್ಲಿ ನಡುವೆ ವಿಮಾನಯಾನ ಸೇವೆ ಆರಂಭಿಸಬೇಕೆಂಬ ಹಲವು ದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಇಂಡಿಗೋ ವಿಮಾನ ಸಂಸ್ಥೆಯು ತನ್ನ ಮೊದಲ ಸಂಚಾರವನ್ನು ಶುಕ್ರವಾರ ಆರಂಭಿಸಿದೆ. ಡೆಲ್ಲಿಯಿಂದ ಪ್ರಯಾಣಿಕರನ್ನು ಹೊತ್ತೊಯ್ದ ವಿಮಾನವು ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಅದೇ ರೀತಿ 140 ಪ್ರಯಾಣಿಕರನ್ನು ಮಂಗಳೂರು ವಿಮಾನ ನಿಲ್ದಾಣದಿಂದ ಹೊತ್ತೊಯ್ದ ವಿಮಾನವು 10.40ಕ್ಕೆ ಮರಳಿ ಡೆಲ್ಲಿ ತಲುಪಿದೆ.
ವಾರದಲ್ಲಿ ಸೋಮವಾರ , ಬುಧವಾರ, ಶುಕ್ರವಾರ ಹಾಗೂ ರವಿವಾರ ಸೇರಿದಂತೆ ವಾರದಲ್ಲಿ ನಾಲ್ಕು ದಿನಗಳಲ್ಲಿ ಈ ವಿಮಾನ ಸಂಚಾರ ಇರಲಿದೆ. ಈಗಾಗಲೇ ಮಂಗಳೂರು-ಪೂನಾ-ಡೆಲ್ಲಿ ನಡುವೆ ವಿಮಾನ ಸಂಚಾರ ನಡೆಯುತ್ತಿದ್ದು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಡೆಲ್ಲಿ ನೇರ ವಿಮಾನದಿಂದ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.
Kshetra Samachara
02/07/2022 01:23 pm