ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದ್ದು ಹಲವೆಡೆ ಕೃತಕ ನೆರೆ ಉಂಟಾಗಿದೆ. ಮುಲ್ಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ಬಳಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಸಮೀಪದ ಕೃಷಿಕ ರಘುನಾಥ ಕಾಮತ್ ಎಂಬವರ ಗದ್ದೆಗೆ ನುಗ್ಗಿದ್ದು ಹಾನಿ ಸಂಭವಿಸಿದೆ.
ರಘುನಾಥ್ ಕಾಮತ್ ಗದ್ದೆ ಹಸನು ಮಾಡಿ ಬೀಜ ಬಿತ್ತಲು ತಯಾರಿ ನಡೆಸಿದ್ದು ಮಳೆಯಿಂದಾಗಿ ನಷ್ಟ ಉಂಟಾಗಿದೆ. ಸ್ಥಳಕ್ಕೆ ಕಿಲ್ಪಾಡಿ ಗ್ರಾಮ ಉಪಾಧ್ಯಕ್ಷ ಗೋಪಿನಾಥ ಪಡಂಗ, ಪಿಡಿಓ ಪೂರ್ಣಿಮಾ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಭಾರಿ ಮಳೆಗೆ ಕುಬೆವೂರು ಶಿಮಂತೂರು ದೇವಸ್ಥಾನದ ರಸ್ತೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಜಲಾವೃತವಾಗಿದ್ದು, ರಾಷ್ಟ್ರೀಯ ಹೆದ್ದಾರಿ66ರ ಕೋಲ್ನಾಡು ಬಳಿ ಕೃತಕ ನೆರೆಯಿಂದ ದಿನೇಶ್ ಎಂಬವರ ಮನೆಗೆ ನೀರು ನುಗ್ಗಿದೆ.
ಭಾರಿ ಮಳೆಗೆ ಕಿನ್ನಿಗೋಳಿ, ಕಟೀಲು, ಪಕ್ಷಿಕೆರೆ, ಹಳೆಯಂಗಡಿ ನಡೀತೀರದ ತಗ್ಗು ಪ್ರದೇಶಗಳು ಜಲಾವೃತದ ಭೀತಿಯಲ್ಲಿದ್ದು ತೀರದ ನಿವಾಸಿಗಳಿಗೆ ಎಚ್ಚರಿಕೆಯಿಂದ ಇರಲು ಮುಲ್ಕಿ ತಹಶೀಲ್ದಾರ್ ಗುರುಪ್ರಸಾದ್ ಸೂಚನೆ ನೀಡಿದ್ದಾರೆ
Kshetra Samachara
30/06/2022 06:47 pm