ಚೇಳಾಯರು: ಹಳೆಯಂಗಡಿ ಸಮೀಪದ ಕೊಂಕಣ ರೈಲ್ವೇ ಅಧೀನಕ್ಕೆ ಒಳಪಡುವ ಚೇಳಾಯರು ರೈಲ್ವೇ ಮೇಲ್ಸೇತುವೆಯಲ್ಲಿ ಪಾದಚಾರಿಗಳಿಗೆ ನಡೆದುಕೊಂಡು ಹೋಗಲು ಆಧಾರಸ್ತಂಭವಾಗಿರುವ ಕಬ್ಬಿಣದ ತಡೆಬೇಲಿ ತುಕ್ಕು ಹಿಡಿದಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.
ರೈಲ್ವೇ ಮೇಲ್ಸೇತುವೆ ಕೆಳಗಡೆ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ತುಕ್ಕು ಹಿಡಿದ ಕಬ್ಬಿಣದ ತಡೆಬೇಲಿ ಕಿತ್ತುಹೋದ ಸ್ಥಿತಿಯಲ್ಲಿದ್ದು ವಾಹನ ಸವಾರರ ಮೇಲೆ ಬೀಳುವ ಸಾಧ್ಯತೆ ಇದೆ.
ಅಲ್ಲದೆ ರೈಲ್ವೇ ಹಳಿಯ ಬದಿಯಲ್ಲಿ ಕೆಲ ಕೂಲಿಕಾರ್ಮಿಕರು ನಡೆದುಕೊಂಡು ಹೋಗುತ್ತಿದ್ದು ಮತ್ತಷ್ಟು ಅಪಾಯ ಸಂಭವಿಸುವ ಮೊದಲೇ ರೈಲ್ವೇ ಇಲಾಖೆ ಎಚ್ಚೆತ್ತು ಸರಿಪಡಿಸಬೇಕು ಎಂದು ಸ್ಥಳೀಯರಾದ ಸಂತೋಷ್ ಪೂಜಾರಿ ಆಗ್ರಹಿಸಿದ್ದಾರೆ.
Kshetra Samachara
29/06/2022 02:25 pm