ಬ್ರಹ್ಮಾವರ: ದೇಶದಾದ್ಯಂತ 5 ವರ್ಷದ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಲು ಗ್ರಾಮೀಣ ಭಾಗಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯವಸ್ಥೆ ಮಾಡಿದೆ. ಅದರಂತೆ ಪ್ರತಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಮಕ್ಕಳ ಪೋಷಕರಿಗೆ ನಿಗದಿತ ದಿನದಂದು ಆಧಾರ್ ಕಾರ್ಡ್ ಮಾಡಲು ಸ್ಥಳೀಯ ಗ್ರಾಮ ಪಂಚಾಯತಿ ಭಾಗದಲ್ಲಿ ವ್ಯವಸ್ಥೆ ಮಾಡಿದ್ದಾರೆ.
ಬಾರಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನೇಕ ಪೋಷಕರು ಮಕ್ಕಳನ್ನು ಕರೆತಂದು ಆಧಾರ್ ಕಾರ್ಡ್ ಮಾಡುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ಆಧಾರ್ ಕಾರ್ಡ್ ಹೊಂದಿದ ಮಕ್ಕಳ ತಂದೆ ಅಥವಾ ತಾಯಿಯ ಬೆರಳಚ್ಚು ತೆಗೆದು ಮಗುವಿನ ಭಾವ ಚಿತ್ರದೊಂದಿಗೆ ಆಧಾರ್ ಕಾರ್ಡ್ ಮಾಡಲಾಗುತ್ತಿದ್ದು, ಮೂರು ವಾರದಲ್ಲಿ ಆಧಾರ್ ಕಾರ್ಡ್ ಪೋಷಕರ ಕೈ ಸೇರಲಿದೆ. ಗ್ರಾಮೀಣ ಭಾಗದಲ್ಲಿ ಈ ಅಭಿಯಾನ ಅಕ್ಟೋಬರ್ ತಿಂಗಳ ತನಕ ನಡೆಯಲಿದ್ದು ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳು ವಂತೆ ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರ್ ನಾಯ್ಕ್ ತಿಳಿಸಿದ್ದಾರೆ.
Kshetra Samachara
11/06/2022 05:33 pm