ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸುಗಮ ಸಂಚಾರಕ್ಕೆ ಅನುವು ಮಾಡಲು ಏಳು ರಸ್ತೆಗಳು ಅಭಿವೃದ್ಧಿಯತ್ತ!

ಮಂಗಳೂರು: ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಲು ಈಗಾಗಲೇ ನಗರದಲ್ಲಿ ಹಲವು ರಸ್ತೆಗಳನ್ನು ಅಗಲಗೊಳಿಸಿ ಮೇಲ್ದರ್ಜೆಗೇರಿಸಲಾಗಿದೆ. ಇದೀಗ ನಗರದ ಮತ್ತೆ ಏಳು ರಸ್ತೆಗಳು ಅಭಿವೃದ್ಧಿ ಆಗಲಿದೆ. ಮಂಗಳೂರು ಮನಪಾ ಹಾಗೂ ಸ್ಮಾರ್ಟ್ ಸಿಟಿ ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಈ ರಸ್ತೆ ಅಗಲೀಕರಣಕ್ಕೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನ ಮಾಡಲಾಗುತ್ತದೆ. ಆ ಬಳಿಕ ಕೆಲವೆಡೆ ಸ್ಮಾರ್ಟ್ ಸಿಟಿ ಯೋಜನೆ ಮೂಲಕ, ಮತ್ತೆ ಹಲವೆಡೆ ಮನಪಾ ರಸ್ತೆ ಕಾಮಗಾರಿ ನಡೆಸಲಿದೆ. ಭೂಸ್ವಾಧೀನ ಪರಿಹಾರ ಮತ್ತೆ ಕಾಮಗಾರಿಯನ್ನು ಪಾಲಿಕೆ ನಿರ್ವಹಿಸಲಿದೆ. ಪ್ರಮುಖವಾಗಿ ನಗರದ ಬೀಬಿ‌ ಅಲಾಬಿ ರಸ್ತೆ, ಪಿವಿಎಸ್ ಜಂಕ್ಷನ್ - ಕದ್ರಿ ಮಲ್ಲಿಕಟ್ಟೆ ರಸ್ತೆ, ಮಂಗಳಾದೇವಿ ದೇವಸ್ಥಾನ - ಮುಳಿಹಿತ್ಲು ರಸ್ತೆ, ಎ.ಬಿ.ಶೆಟ್ಟಿ ವೃತ್ತ- ಮಂಗಳಾದೇವಿ ರಸ್ತೆ, ಬೋಳಾರ ಲೀವೆಲ್ ಜಂಕ್ಷನ್ - ಮೋರ್ಗನ್ ಗೇಟ್ ರಸ್ತೆ, ಪೋರಂ ಮಾಲ್ ಬಳಿಯ ರಸ್ತೆ, ಗೂಡ್ ಶೆಡ್ ರಸ್ತೆಯು ಈ ಕಾಮಗಾರಿಯಲ್ಲಿ ಅಭಿವೃದ್ಧಿಗೊಳ್ಳಲಿದೆ.

ಮಂಗಳೂರು ಮನಪಾ ಪ್ರೀಮಿಯಂ ಎಫ್ಎಆರ್ ಅನುದಾನದ ಸುಮಾರು 5.82 ಕೋಟಿ ರೂ. ವೆಚ್ಚದಲ್ಲಿ ಈ ರಸ್ತೆ ಕಾಮಗಾರಿ ನಡೆಯಲಿದೆ. ಹಲವೆಡೆ ರಸ್ತೆ ಅಗಲಗೊಂಡರೂ, ಅಭಿವೃದ್ಧಿ ಕಾಮಗಾರಿ ಜಾಗದ ಸಮಸ್ಯೆಯಿಂದ ಹಾಗೆಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ ಆಯಾ ಪ್ರದೇಶಗಳ ಜಾಗದ ಮಾಲಕರೊಂದಿಗೆ ಶಾಸಕ ವೇದವ್ಯಾಸ ಕಾಮತ್ ಹಾಗೂ ಮೇಯರ್ ಪ್ರೇಮಾನಂದ ಶೆಟ್ಟಿಯವರು ಮಾತುಕತೆ ನಡೆಸಿದ್ದಾರೆ‌. ಹೆಚ್ಚಿನವರು ರಸ್ತೆ ಅಗಲೀಕರಣಕ್ಕೆ ಟಿಡಿಆರ್ ಮೂಲಕ‌ ಜಾಗ ಬಿಟ್ಟು ಕೊಡಲು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಾಮಗಾರಿಗೆ ವೇಗ ದೊರಕಲಿದೆ.

Edited By : Nagesh Gaonkar
Kshetra Samachara

Kshetra Samachara

10/06/2022 06:38 pm

Cinque Terre

10.2 K

Cinque Terre

1

ಸಂಬಂಧಿತ ಸುದ್ದಿ