ಉಡುಪಿ: ಹಲವುದಿನಗಳಿಂದ ಸ್ಥಳೀಯ ಟೋಲ್ ಗೇಟ್ ನಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು,ಇದೀಗ ಸ್ಥಳೀಯರಿಗೆ ಟೋಲ್ ನಲ್ಲಿ ಶುಲ್ಕ ವಿನಾಯತಿ ಆಗ್ರಹಿಸಿ ಸಾಸ್ತಾನದಲ್ಲಿ ನಡೆದ ಪ್ರತಿಭಟನೆಗೆ ಯಶಸ್ಸು ದೊರಕಿದ್ದು ಕೋಟ ಜಿಪಂ ವ್ಯಾಪ್ತಿಯ ವಾಹನ ಸವಾರರಿಗೆ ಶುಲ್ಕ ರಹಿತವಾಗಿ ಸಂಚರಿಸಲು ಅನುಮತಿ ದೊರಕಿದೆ.
ಸ್ಥಳೀಯರಿಗೆ ಟೋಲ್ ವಿನಾಯತಿಗೆ ಆಗ್ರಹಿಸಿ ಹೆದ್ದಾರಿ ಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಿರುವ ಪ್ರತಿಭಟನೆ ಸಾಸ್ತಾನ ಟೋಲ್ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸ್ಥಳೀಯರ ಹಾಜರಾತಿಯೊಂದಿಗೆ ನಡೆದಿದ್ದು ಸಮಿತಿಯ ಐದು ಮಂದಿ ಸದಸ್ಯರು, ಲೋಕಸಭಾ ಸದಸ್ಯರು, ಶಾಸಕರು, ಜಿಲ್ಲಾಡಳಿತ ಮತ್ತು ನವಯುಗ ಕಂಪೆನಿಯೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಜನಪ್ರತಿನಿಧಿಗಳು ಸ್ಥಳೀಯರಿಗೆ ಸಂಪೂರ್ಣ ಶುಲ್ಕ ವಿನಾಯತಿಗೆ ಆಗ್ರಹಿಸಿದರು.
ಹೆದ್ದಾರಿ ಜಾಗೃತಿ ಸಮಿತಿಯ ಪರವಾಗಿ ಅಧ್ಯಕ್ಷರಾದ ಶ್ಯಾಮಸುಂದರ್ ನಾಯರಿ, ಪದಾಧಿಕಾರಿಗಳಾದ ಆಲ್ವಿನ್ ಅಂದ್ರಾದೆ, ದಿನೇಶ್ ಗಾಣಿಗ, ಸತೀಶ್ ಪೂಜಾರಿ ಭೋಜ ಪೂಜಾರಿ ಹಾಗೂ ಇತರರು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿದ ಸಂಸದೆ ಶೋಭಾ ಕರಂದ್ಲಾಜೆ, ಮತ್ತು ಉಡುಪಿ ಶಾಸಕ ರಘುಪತಿ ಭಟ್ ಅವರು ಸ್ಥಳೀಯರಿಗೆ ಯಾವುದೇ ಕಾರಣಕ್ಕೂ ಟೋಲ್ ಪಡೆಯದಂತೆ ಪಟ್ಟು ಹಿಡಿದರು. ಇದಕ್ಕೆ ನವಯುಗ ಕಂಪೆನಿ ಒಪ್ಪದೆ ಇದ್ದಾಗ ಆಕ್ರೋಶಗೊಂಡ ಶಾಸಕ ರಘುಪತಿ ಭಟ್ ಮತ್ತು ಸಂಸದರು ಕಂಪೆನಿಗೆ ಟೋಲ್ ಪ್ಲಾಜಾಗಳಲ್ಲಿ ಮುಂದಿನ ದಿನಗಳಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಭದ್ರತೆ ನೀಡುವುದನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳು ಕೂಡ ಇದಕ್ಕೆ ಒಪ್ಪಿದರು.
Kshetra Samachara
22/02/2021 11:01 pm