ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ಮಳೆಗಾಲದ ನಿಷೇಧ ಅಂತ್ಯ: ಮತ್ಸ್ಯ ಬೇಟೆಗೆ ಕಡಲಿಗಿಳಿದ ಮೀನುಗಾರರು!

ವರದಿ: ರಹೀಂ ಉಜಿರೆ

ಮಲ್ಪೆ: ಮುಂಗಾರು ಅಬ್ಬರ ತಣ್ಣಗಾಗಿದೆ. ಕಡಲು ತಕ್ಕಮಟ್ಟಿಗೆ ಶಾಂತಗೊಂಡಿದೆ.ಎರಡು ತಿಂಗಳ ಆಳಸಮುದ್ರ ಮೀನುಗಾರಿಕೆ ನಿಷೇಧವೂ ಕೊನೆಗೊಂಡಿದೆ.ಇನ್ನೇನಿದ್ದರೂ ಮತ್ಸ್ಯ ಬೇಟೆ ಶುರು.

ಹೌದು ,ಆಳಸಮುದ್ರ ಮೀನುಗಾರಿಕೆಯ ನಿರ್ಬಂಧದ ಅವಧಿ ಜುಲೈ 31ಕ್ಕೆ ಮುಕ್ತಾಯವಾಗಿದ್ದು, ಉಡುಪಿಯ ಮಲ್ಪೆಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ಮತ್ತೆ ಆರಂಭವಾಗಿದೆ. ಸರ್ಕಾರದ ನಿಯಮಗಳ ಪ್ರಕಾರ ಪ್ರತಿವರ್ಷ ಜೂನ್ 1ರಿಂದ ಜುಲೈ ಅಂತ್ಯದವರೆಗೂ ಆಳಸಮುದ್ರ ಮೀನುಗಾರಿಕೆಯ ಮೇಲೆ ನಿರ್ಬಂಧ ಇರುತ್ತದೆ.

ಮೀನುಗಳ ಸಂತಾನೋತ್ಪತ್ತಿ ಮತ್ತು ಮಳೆಗಾಲದಲ್ಲಿ ಕಡಲು ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಎರಡು ತಿಂಗಳು ನಿಷೇಧ ಹೇರಲಾಗುತ್ತದೆ. ಸದ್ಯ ನಿಷೇಧದ ಅವಧಿ ಮುಗಿದಿರುವುದರಿಂದ ಮೀನುಗಾರರು ಅಪಾರ ನಿರೀಕ್ಷೆಗಳೊಂದಿಗೆ ಕಡಲಿಗಿಳಿದಿದ್ದಾರೆ.

ಮಲ್ಪೆ ಸರ್ವಋತು ಬಂದರಿನಲ್ಲಿ ಬೋಟ್ಗಳು ಸಮುದ್ರಕ್ಕೆ ಇಳಿಯತೊಡಗಿದ್ದು, ಕೆಲ ದಿನಗಳಲ್ಲಿ ಸಮುದ್ರ ಪೂಜೆ ನಡೆದು, ನಂತರ ಪೂರ್ಣ ಪ್ರಮಾಣದಲ್ಲಿ ಮೀನುಗಾರಿಕೆ ನಡೆಯಲಿದೆ.

ಮಲ್ಪೆ ಬಂದರಿನಲ್ಲಿ ಸುಮಾರು 1500ಕ್ಕೂ ಅಧಿಕ ಯಾಂತ್ರೀಕೃತ ಬೋಟ್ ಗಳಿವೆ.ಇವನ್ನು ಆಯಾ ಬೋಟ್ ಗಳ ಮಾಲೀಕರು ಸನ್ನದ್ಧಗೊಳಿಸಿ ಮತ್ಸ್ಯ ಬೇಟೆಗೆ ಬೇಕಾದ, ಬಲೆ, ಡೀಸೆಲ್ ಸಂಗ್ರಹ, ಮಂಜುಗಡ್ಡೆಯನ್ನು ಹಾಕಿ ಸಜ್ಜುಗೊಳಿಸಲಾಗುತ್ತಿದ್ದಾರೆ. ಈ ಬಾರಿ ಭಾರಿ ಮಳೆಯಾಗಿ, ಸಮುದ್ರ ಪ್ರಕ್ಷುಬ್ಧವಾದ ಕಾರಣ ಕಡಲು ಅಡಿಮೇಲಾಗಿ ಹೆಚ್ಚಿನ ಮೀನುಗಾರಿಕೆಯಾಗುವ ನಿರೀಕ್ಷೆ ಮೀನುಗಾರರದ್ದು.ಆಗಸ್ಟ್ ತಿಂಗಳ ಇಪ್ಪತ್ತರ ಬಳಿಕ ಮತ್ಸ್ಯ ಪ್ರಿಯರಿಗೆ ಯಥೇಚ್ಛ ಪ್ರಮಾಣದಲ್ಲಿ ,ಅಗ್ಗದ ದರದಲ್ಲಿ ಮೀನು ಸಿಗಲಿದೆ.

Edited By :
PublicNext

PublicNext

04/08/2022 04:56 pm

Cinque Terre

33.79 K

Cinque Terre

1

ಸಂಬಂಧಿತ ಸುದ್ದಿ