ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಸ್ತೆ ದುರಸ್ತಿಗೆ ಆಗ್ರಹಿಸಿ ಮನಪಾ ಅವ್ಯವಸ್ಥೆ ವಿರುದ್ಧ ವಿನೂತನ ಪ್ರತಿಭಟನೆ

ಇತ್ತೀಚೆಗೆ ರಸ್ತೆ ಹೊಂಡಕ್ಕೆ ವಿದ್ಯಾರ್ಥಿ ಬಲಿಯಾಗಿರುವುದನ್ನು ಖಂಡಿಸಿ ಆತನ ಸ್ನೇಹಿತ ಏಕಾಂಗಿಯಾಗಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ, ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದ. ಇದರ ಬೆನ್ನಲ್ಲೇ ಮಂಗಳೂರು ಮಹಾನಗರ ಪಾಲಿಕೆಯ ರಸ್ತೆ ಅವ್ಯವಸ್ಥೆಯ ವಿರುದ್ಧ ಸಾಮಾಜಿಕ ಹೋರಾಟಗಾರ ಜೆರಾರ್ಡ್ ಟವರ್ಸ್ ಹಾಗೂ ಸ್ಥಳೀಯರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ರಸ್ತೆಯಲ್ಲಿದ್ದ ಜಲ್ಲಿಕಲ್ಲುಗಳನ್ನು ಗುಡಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರು ನಗರದ ಕದ್ರಿಯ ವೃತ್ತನಲ್ಲಿ ಅಗೆದು ಹಾಕಿರುವ ರಸ್ತೆಯನ್ನು ದುರಸ್ತಿಗೊಳಿಸಿಲ್ಲ. ಪರಿಣಾಮ ಜಲ್ಲಿ ಎದ್ದು ಬೈಕ್ ಹಾಗೂ ರಿಕ್ಷಾ ಚಾಲಕರಿಗೆ ಸಮಸ್ಯೆ ಆಗುತ್ತಿದೆ. ಜಲ್ಲಿಗಳಿಂದ ಬೈಕ್ ಸವಾರರು ತೊಂದರೆ ಅನುಭವಿಸುತ್ತಿದ್ದರೆ, ವಾಹನಗಳ ಚಕ್ರದಡಿಗೆ ಸಿಲುಕಿ ಜಲ್ಲಿ ಹಾರಿ ರಿಕ್ಷಾಗಳಿಗೆ ಬಡಿದು, ಗಾಜುಗಳು ಡ್ಯಾಮೇಜ್ ಆಗಿದೆ. ಇದರಿಂದ ರೋಸಿ ಹೋಗಿರುವ ರಿಕ್ಷಾ ಹಾಗೂ ಟೆಂಪೋ ಚಾಲಕರು, ಸಾಮಾಜಿಕ ಹೋರಾಟಗಾರ ಜೆರಾರ್ಡ್ ಟವರ್ಸ್ ನೇತೃತ್ವದಲ್ಲಿ ರಸ್ತೆಯಲ್ಲಿದ್ದ ಜಲ್ಲಿ ಕಲ್ಲು ಗುಡಿಸುವ ಮೂಲಕ ಮಂಗಳೂರು ಮಹಾನಗರ ಪಾಲಿಕೆ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಈ ವೇಳೆ ಅರುಣ್ ಡಿಸೋಜಾ, ಗಿರೀಶ್ ಕದ್ರಿ, ಜಗದೀಶ್, ನವೀನ್ ಡಿಸೋಜಾ ನೀರ್ ಮಾರ್ಗ, ಶಾನೋನ್ ಪಿಂಟೊ, ರೋನಿ, ಕೆ.ಎನ್.ಶೀನಿವಾಸ್, ಪರಿಸರದ ಹಾಗೂ ಆಮ್ ಆದ್ಮಿ ಪಾರ್ಟಿ, ಆಟೋ ರಿಕ್ಷಾ ಚಾಲಕರು, ಟೆಂಪೋ ಚಾಲಕರು ಪ್ರತಿಭಟನೆಗೆ ಸಾಥ್ ನೀಡಿದರು.

Edited By :
PublicNext

PublicNext

16/08/2022 06:19 pm

Cinque Terre

44.85 K

Cinque Terre

2

ಸಂಬಂಧಿತ ಸುದ್ದಿ