ಹನೆಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹರಿಯುವ ಸಾಲು ಹೊಳೆಗೆ 50 ವರ್ಷದ ಹಿಂದೆ ನಿರ್ಮಿಸಿದ್ದ ಕಿರು ಸೇತುವೆ ಬುಡ ಭಾಗದ ಕಲ್ಲುಗಳು ತುಂಡಾಗಿ ಸೇತುವೆ ಬೀಳುವ ಸ್ಥಿತಿಯಲ್ಲಿದೆ.
ರೈತರು ಬೆಳೆಗಳನ್ನು ಹನೆಹಳ್ಳಿ ಮೂಲಕ ಬಾರಕೂರು ಸಂತೆಗೆ ಉಡುಪಿಗೆ ನಡೆದಾಡಿಕೊಂಡು ಹೋಗುವ ಮುಖ್ಯ ಕಾಲು ದಾರಿ ನಡುವೆಯ ಸೇತುವೆ ಇದಾಗಿದೆ. ಕೃಷಿಕರಿಗೆ ಶಾಲಾ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಇದು ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ. 25 ವರ್ಷದ ಹಿಂದೆ ಒಮ್ಮೆ ಕುಸಿದು ಬಿದ್ದಾಗ ಅರ್ಧ ಭಾಗವನ್ನು ಮಾತ್ರ ನವೀಕರಣ ಮಾಡಲಾಗಿತ್ತು. ಉಳಿದ ಅರ್ಧ ಭಾಗದ ಮಧ್ಯದಲ್ಲಿ ತುಂಡಾಗಿ ಇದೀಗ ಬಿರುಕು ಬಿಟ್ಟಿದೆ. 1 ಮೀಟರ್ ಅಗಲದ 30 ಮೀಟರ್ ಉದ್ದದ ಈ ಸೇತುವೆಯನ್ನು ತೆಗೆದು ಯಾಂತ್ರಿಕೃತ ಕೃಷಿಗೆ ಸರಿಹೊಂದುವಂತೆ ಅಗಲೀಕರಣ, ನವೀಕರಣದ ಸೇತುವೆಯನ್ನು ಸಂಬಂಧಪಟ್ಟ ಇಲಾಖೆ ಮಾಡಬೇಕಾಗಿದೆ.
Kshetra Samachara
15/09/2022 03:46 pm