ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸ್ಮಾರ್ಟ್ ಸಿಟಿ ಕಲರ್ ಫುಲ್ ಕನಸಿಗೆ ಕೊಳ್ಳಿ ಇಟ್ಟ ಅಧಿಕಾರಿಗಳು!

ವರದಿ: ಇರ್ಷಾದ್ ಕಿನ್ನಿಗೋಳಿ, ಪಬ್ಲಿಕ್ ನೆಕ್ಸ್ಟ್, ಮಂಗಳೂರು

ಮಂಗಳೂರು: ಎರಡು ವರ್ಷಗಳ ಹಿಂದೆ ಸ್ಮಾರ್ಟ್ ಸಿಟಿ ಯೋಜನೆಗೆ ಮಂಗಳೂರು ನಗರ ಆಯ್ಕೆಯಾಗಿದ್ದ ಸಂದರ್ಭ ಹತ್ತು ಹಲವು ಬಣ್ಣ ಬಣ್ಣದ ಕನಸು ಬಿತ್ತಲಾಗಿತ್ತು. ಆದರೆ, ಕಳೆದೆರಡು ವರ್ಷಗಳಲ್ಲಿ ಕಾಣದ ಸ್ಮಾರ್ಟ್ ಸಿಟಿ ಕಾಮಗಾರಿ ಈಗ ಏಕಾಏಕಿ ಎದ್ದೆನೋ, ಬಿದ್ದೆನೋ ಅಂತಾ ಶುರು ಮಾಡಿದ್ದು, ನಗರದ ಜನತೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಏಕಕಾಲಕ್ಕೆ ನಗರದಲ್ಲಿರುವ ಎಲ್ಲಾ ರಸ್ತೆಗಳನ್ನು ಅಗೆದು ಸಂಚಾರ ಬಂದ್ ಮಾಡಲಾಗಿದೆ.

ಇದರಿಂದಾಗಿ ಪ್ರಮುಖ ಸರಕಾರಿ ಕಚೇರಿ ತಲುಪಲು ಜನರು ಹರಸಾಹಸ ಪಡಬೇಕಿದೆ.‌ ಒಂದರ್ಥದಲ್ಲಿ ಮಂಗಳೂರು ನಗರವನ್ನು ದ್ವೀಪ ಪ್ರದೇಶದಂತೆ ಮಾರ್ಪಾಟು ಮಾಡಲಾಗಿದೆ‌. ಯಾವೊಂದೂ ಪೂರ್ವ ಯೋಜನೆಯಿಲ್ಲದೆ ಸ್ಮಾರ್ಟ್ ಸಿಟಿ ಕಮಿಟಿ, ಪಾಲಿಕೆ ಅಧಿಕಾರಿಗಳು ತೆಗೆದುಕೊಂಡ ನಿರ್ಧಾರಗಳು ಎಲ್ಲವೂ ಉಲ್ಟಾ ಪಲ್ಟಾ ಆಗಿದೆ!. ಹಂಪನಕಟ್ಟೆ, ಕಾರ್ ಸ್ಟ್ರೀಟ್, ಮಿಲಾಗ್ರಿಸ್ ಮುಂತಾದೆಡೆ ರಸ್ತೆ ಸಂಚಾರಕ್ಕೆ ತಡೆ ಉಂಟು ಮಾಡಿದ್ದು, ದೀಪಾವಳಿ ವ್ಯಾಪಾರದ ನಿರೀಕ್ಷೆಯಲ್ಲಿದ್ದ ಅಂಗಡಿಗಳಿಗೆ ಭಾರೀ ಹೊಡೆತ ನೀಡಿದೆ. ಈಗಷ್ಟೇ ಕೊರೊನಾದಿಂದ ಚೇತರಿಸುತ್ತಿದ್ದ ವ್ಯಾಪಾರ ವಹಿವಾಟು ಸ್ಮಾರ್ಟ್ ಸಿಟಿಯ ಕಾರಣದಿಂದ ಮಂಕಾಗಿದೆ. ರಸ್ತೆ ಸಂಪರ್ಕವಿಲ್ಲದೆ ಧೂಳು ತುಂಬಿಕೊಂಡ ಪರಿಣಾಮ ಗ್ರಾಹಕರು ಯಾರೂ ಇತ್ತ ಕಡೆ ಹೆಜ್ಜೆ ಹಾಕುತ್ತಿಲ್ಲ. ಜನಪ್ರತಿನಿಧಿ, ಪಾಲಿಕೆ ಅಧಿಕಾರಿಗಳ ವಿರುದ್ಧ ಜನ ಗರಂ ಆಗಿದ್ದಾರೆ. ಇನ್ನೊಂದೆಡೆ ನಗರದಲ್ಲಿ ಟ್ರಾಫಿಕ್ ದಟ್ಟಣೆಯೂ ಹೆಚ್ಚಾಗುತ್ತಿದ್ದು, ಇನ್ನೂ ಎರಡು ತಿಂಗಳ ಕಾಲ ಸ್ಮಾರ್ಟ್ ಸಿಟಿಯ ರಸ್ತೆ ನಿರ್ಮಾಣ ಕಾಮಗಾರಿ ನಡೆಯಲಿದ್ದು ವ್ಯಾಪಾರಿಗಳು, ಜನ ಸಾಮಾನ್ಯರು ದೇವರೇ ಗತಿ ಅನ್ನೋ ಹಾಗಾಗಿದೆ.

Edited By : Manjunath H D
Kshetra Samachara

Kshetra Samachara

13/11/2020 09:34 am

Cinque Terre

22.06 K

Cinque Terre

5

ಸಂಬಂಧಿತ ಸುದ್ದಿ