ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಕತ್ತೆ ಹಾಲು, ಮೂತ್ರಕ್ಕೆ ಭಾರೀ ಬೇಡಿಕೆ : ಕಡಲತಡಿಯ ಉತ್ಸಾಹಿ ತರುಣರಿಂದ ಮೊದಲ ಕತ್ತೆ ಫಾರ್ಮ್ ರೆಡಿ...!

ಮಂಗಳೂರು: ಮಂಗಳೂರು ಹೊರವಲಯದ ಕೊಣಾಜೆ ಬಳಿಯ ಇರಾದಲ್ಲಿ ಕರ್ನಾಟಕದಲ್ಲೇ ಮೊದಲ ಬಾರಿಗೆ ಕತ್ತೆ ಫಾರ್ಮ್ ಆರಂಭ ಆಗ್ತಿದೆ.

ದೇಶದಲ್ಲಿ ಎರಡನೇ ಕತ್ತೆ ಫಾರ್ಮ್ ಇದಾಗಿದ್ದು, ಅಳಿವಿನಂಚಿನಲ್ಲಿರುವ ಕತ್ತೆಗಳನ್ನು ಮತ್ತೆ ಬದುಕಿಸಬೇಕು. ಮತ್ತು ಅದರ ಭರಪೂರ ಪ್ರಯೋಜನೆಗಳನ್ನು ಜನರು ತಿಳಿದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಕೃಷಿ ವಿವಿಯ ಡಾ.ಶ್ರೀನಿವಾಸ ಗೌಡ ಅವರ ಗರಡಿಯಲ್ಲಿ ಐದು ಮಂದಿ ಉತ್ಸಾಹಿ ಐಟಿ ಉದ್ಯೋಗಿಗಳು ಕೊಣಾಜೆ ಬಳಿಯ ಇರಾದಲ್ಲಿ ಕತ್ತೆ ಫಾರ್ಮ್ ರೆಡಿ ಮಾಡಿದ್ದಾರೆ.

ಕೊರೊನಾ ಕಾಲದಲ್ಲಿ ತನ್ನ ಐಟಿ ಉದ್ಯೋಗಕ್ಕೆ ಕತ್ತರಿ ಬಿದ್ದಾಗ ಬೆಂಗಳೂರಿನ ಜೆಪಿ ನಗರದಲ್ಲಿ ನೆಲೆಸಿದ್ದ ಶ್ರೀನಿವಾಸ ಗೌಡರು ತಡ ಮಾಡಲಿಲ್ಲ. ಏನಾದ್ರೂ ಕೃಷಿ ಮಾಡಬೇಕು ಎಂಬ ಆಸಕ್ತಿ, ಯೋಚನೆ ಹೊಂದಿದ್ದ ಗೌಡರು, ತನ್ನ ಐವರು ಸ್ನೇಹಿತರ ಜೊತೆ ಸೇರಿ ನೇರವಾಗಿ ಕೃಷಿ ಕಾರ್ಯಕ್ಕೆ ಧುಮುಕಿದ್ದರು.

ಸ್ನೇಹಿತರ ಸಲಹೆಯಂತೆ ಕೊಣಾಜೆ ಬಳಿಯ ಇರಾದಲ್ಲಿ 2.35 ಎಕ್ರೆ ಜಾಗವನ್ನು ಲೀಸ್ ಪಡೆದು ಕುರಿ ಮತ್ತು ಆಡು ಸಾಕಣೆ ಆರಂಭಿಸಿದ್ದರು. ಎರಡು ವರ್ಷಗಳ ದುಡಿಮೆಯ ಬಳಿಕ ಇದೀಗ ಅಪರೂಪದ ಕೆಲಸಕ್ಕೆ ಕೈಹಾಕಿದ್ದಾರೆ.

ಗುಜರಾತ್ ಮತ್ತು ಆಂಧ್ರಪ್ರದೇಶದಿಂದ 20 ಕತ್ತೆಗಳನ್ನು ತಂದು ಅದೇ ಎರಡೂವರೆ ಎಕ್ರೆ ಜಾಗದಲ್ಲಿ ಪ್ರತ್ಯೇಕ ಕೊಟ್ಟಿಗೆ ಮಾಡಿದ್ದಾರೆ. ಅವರು ಹೇಳೋ ಪ್ರಕಾರ, ಕತ್ತೆ ಹಾಲಿನಲ್ಲಿ ಅತಿ ಹೆಚ್ಚು ಪ್ರೋಟೀನ್ ಇದ್ದು, ಮಕ್ಕಳಲ್ಲಿ ಬುದ್ಧಿಶಕ್ತಿ ಬೆಳೆಯಲು, ಅಪೌಷ್ಟಿಕತೆಯಿಂದ ನರಳುವ ಮಕ್ಕಳಿಗೆ ಇದನ್ನು ಕುಡಿದರೆ ಅತ್ಯಂತ ಸಹಕಾರಿಯಂತೆ.

ಮಧುಮೇಹ, ರಕ್ತಹೀನತೆ, ಅಲರ್ಜಿ ಇತ್ಯಾದಿ ಚರ್ಮ ರೋಗಗಳಿಗೂ ರಾಮಬಾಣವಂತೆ. ಹಾಲಿನಲ್ಲಿ ಅತಿ ಹೆಚ್ಚು ರೋಗ ನಿರೋಧಕ ಗುಣಗಳಿರುವುದರಿಂದ ಇದನ್ನು ವಾರಕ್ಕೊಮ್ಮೆ ಹತ್ತು ಎಂ.ಎಲ್ ನಷ್ಟು ಕುಡಿಯಲು ಬಳಸಿದರೆ, ಮೂರು ತಿಂಗಳಲ್ಲಿ ದೇಹದಲ್ಲಿರುವ ಸಾಮಾನ್ಯ ರೋಗಗಳು ವಾಸಿಯಾಗುವುದಂತೆ.

ಈ ಬಗ್ಗೆ ಹೆಚ್ಚಿನ ಸಂಶೋಧನೆ ಕೈಗೊಂಡಿರುವ ಡಾ.ಶ್ರೀನಿವಾಸ ಗೌಡರ ಮಾರ್ಗದರ್ಶನದಲ್ಲಿ ಹಾಲನ್ನು ಸಣ್ಣ ಸಣ್ಣ ಪ್ಯಾಕೆಟ್ ಮಾಡಿ ಮಂಗಳೂರಿನಲ್ಲಿ ಸ್ಥಳೀಯವಾಗಿ ಮಾರಲು ರೆಡಿ ಮಾಡುತ್ತಿದ್ದಾರೆ.

ಅಂದಹಾಗೆ, ವಿದೇಶಿ ಮಾರುಕಟ್ಟೆಯಲ್ಲಿ ಕತ್ತೆ ಹಾಲಿಗೆ 5ರಿಂದ 7 ಸಾವಿರ ರೂ. ದರವಿದ್ದು, ಇಲ್ಲಿನ ಐಸಿರಿ ಫಾರ್ಮ್ ನಿಂದ ಸಣ್ಣ ಪ್ಯಾಕೆಟ್ ರೂಪದಲ್ಲಿ ಕೊಡಲಾಗುತ್ತಿದೆ. 30 ಎಂ.ಎಲ್, 50 ಎಂ.ಎಲ್, 100, 200 ಎಂಎಲ್ ಹೀಗೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡಲು ಪ್ಯಾಕೆಟ್ ಮಾಡಲಾಗಿದೆ. 30 ಎಂ.ಎಲ್. ಪ್ಯಾಕೆಟಿಗೆ 150 ರೂಪಾಯಿ ದರ ವಿಧಿಸಲಾಗಿದೆ.

Edited By :
Kshetra Samachara

Kshetra Samachara

08/06/2022 06:03 pm

Cinque Terre

5.41 K

Cinque Terre

0

ಸಂಬಂಧಿತ ಸುದ್ದಿ