ವರದಿ: ಶಫೀ ಉಚ್ಚಿಲ
ಉಚ್ಚಿಲ: ಕಾಪು ತಾಲೂಕಿನ ಉಚ್ಚಿಲ ಬಡಾ ಗ್ರಾಮ ಪಂಚಾಯಿತಿನಲ್ಲಿ ತ್ಯಾಜ್ಯದ ಸಮಸ್ಯೆ ಬಹುವಾಗಿ ಕಾಡುತ್ತಿದ್ದು, ಇದನ್ನು ನಿಭಾಯಿಸುವುದೇ ದೊಡ್ಡ ಸವಾಲಾಗಿದೆ. ಇದೀಗ ಉಡುಪಿ ಜಿಲ್ಲಾ ಪಂಚಾಯತ್ ನಿರ್ದೇಶನದಂತೆ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪಿಸಿದ್ದು, ಗ್ರಾಮದ ಎಲ್ಲಾ ಮನೆಗಳ ಹಸಿ ಮತ್ತು ಒಣ ಕಸಗಳನ್ನು ಬೇರ್ಪಡಿಸಿ ಮನೆಯಿಂದ ಕೊಂಡೊಯ್ಯುವ ಪ್ರಕ್ರಿಯೆಗೆ ಮಾಜಿ ಪಂಚಾಯತ್ ಸದಸ್ಯ ದೀವ್ ರಫೀಕ್ ಮುಂದಾಗಿದ್ದಾರೆ.
ಪ್ರತೀ ಮನೆಯವರು ಹಸಿ ಮತ್ತು ಒಣ ಕಸವನ್ನು ವಿಂಗಡಣೆ ಮಾಡಿ ನೀಡಬೇಕು. ಇದರಿಂದ ತ್ಯಾಜ್ಯ ಸಮಸ್ಯೆಗೆ ಮುಕ್ತಿ ದೊರಕಲಿದೆ.ಈ ಸಂದರ್ಭ ದೀವ್ ರಫೀಕ್ ಮಾತನಾಡಿ, ಉಚ್ಚಿಲ ಬಡಾ ಗ್ರಾಮ ಪಂಚಾಯತ್‍ನಲ್ಲಿ 2500 ಮನೆಗಳಿದ್ದು, ಇಲ್ಲಿ ತ್ಯಾಜ್ಯ ಸಮಸ್ಯೆ ಬೃಹತ್ ಸಮಸ್ಯೆಯಾಗಿ ಉಳಿದಿದೆ. ಇದಕ್ಕೆ ಇದೀಗ ಪರಿಹಾರ ದೊರಕಿದ್ದು, ನಾವು ಪ್ರತೀ ಮನೆಯಲ್ಲಿಯೂ ತ್ಯಾಜ್ಯ ಸಂಗ್ರಹ ಮಾಡುತ್ತಿದ್ದೇವೆ. ಎಲ್ಲಾ ಮನೆಯವರು ಹಸಿ ಮತ್ತು ಒಣಕಸವನ್ನು ವಿಂಗಡಣೆ ಮಾಡಿ, ನೀಡಿ ಸಹಕರಿಸಬೇಕು. ಎಲ್ಲೆಂದರಲ್ಲಿ ಅಲ್ಲಿ ಕಸವನ್ನು ಎಸೆದರೆ ಗ್ರಾಮ ಪಂಚಾಯತ್ 2000 ರೂ.ವರೆಗೆ ದಂಡ ವಿಧಿಸಲಿದೆ ಎಂದರು.
Kshetra Samachara
31/10/2020 10:33 am