ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ಬಲೆ ತುಲು ಲಿಪಿ ಕಲ್ಪುಗ" ಕಾರ್ಯಾಗಾರ

ಕಿನ್ನಿಗೋಳಿ ಸಮೀಪದ ಗುತ್ತಕಾಡು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಜೈ ತುಳುನಾಡ್ (ರಿ) ಸಂಘಟನೆಯ ಸಹಕಾರ ದಲ್ಲಿ ಬಲೆ ತುಲು ಲಿಪಿ ಕಲ್ಪುಗ ಕಾರ್ಯಾಗಾರ_ ನಡೆಯಿತು..

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದೈವ ನರ್ತಕ, ಪ್ರಾಧ್ಯಪಕ ಹಾಗೂ ಸಿವಿಲ್ ಇಂಜಿನಿಯರ್ ರವೀಶ್ ಪಡುಮಲೆ ಮಾತನಾಡಿ ಹಿಂದಿನ ಇತಿಹಾಸ ಇರುವ ತುಳು ಭಾಷೆಯನ್ನು ಕಾಲ ಕ್ರಮೇಣ ಕಡೆಗಣಿಸಿದ್ದರೂ ಈಗ ಪ್ರತೀ ಮನೆಯಲ್ಲಿ ತುಳು ಭಾಷೆ ಉಳಿಯಬೇಕು ,ತುಳು ಲಿಪಿ ಕಲಿಯ ಬೇಕು ಎಂದು ಜೈ ತುಳುನಾಡ್ ಸಂಘಟನೆ ಜೊತೆಗೆ ಬೇರೆ ಸಂಘಟನೆ ನಿರಂತರ ಪ್ರಯತ್ನ ಪಡುತ್ತಿದೆ. ತುಳುವರ ಸಂಪ್ರದಾಯ ಸಂಸ್ಕೃತಿ ಆಚಾರ ವಿಚಾರ ಪ್ರಪಂಚದಲ್ಲಿ ಹೆಸರುವಾಸಿಯಾಗಿದೆ ಎಂದರು.

ಜೈ ತುಳುನಾಡ್ ಸಂಘಟನೆಯ ಉಪಾಧ್ಯಕ್ಷ ವಿಶು ಶ್ರೀಕೆರ ಮಾತನಾಡಿ ತುಳುನಾಡಿನಲ್ಲಿ ಬಹಳಷ್ಟು ಮಂದಿ ಸ್ವಾತಂತ್ರ್ಯ ಹೋರಾಟಗಾರ ಇದ್ದಾರೆ ಅವರಿಗೆ ಸರಿಯಾದ ಸ್ಥಾನ ಮಾನ ಸಿಕ್ಕಿಲ್ಲ. ತುಳು ಭಾಷೆ ರಾಜ್ಯ ಭಾಷೆಯಾಗಬೇಕು. ತುಳು ಭಾಷೆ ಗೆ ನಾವೆಲ್ಲರೂ ಒಕ್ಕೊರಲಿನಿಂದ ಹೋರಾಡಬೇಕು ಎಂದರು.

ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಮೂಕಾಂಬಿಕಾ ದೇವಸ್ಥಾನ ದ ಧರ್ಮದರ್ಶಿ ಶ್ರೀ ವಿವೇಕಾನಂದ ಮಾತಾನಾಡಿ ಜೈ ತುಳುನಾಡ್ ಸಂಘಟನೆ ತುಳುವಿಗಾಗಿ ಪಡುತ್ತಿರುವ ಶ್ರಮ ಶ್ಲಾಘನೀಯ. ತುಳು ಭಾಷೆಯನ್ನು ಉಳಿಸುವಲ್ಲಿ ತುಳುವರ ಪಾತ್ರ ಬಹುಮುಖ್ಯ. ಹಾಗೆಯೇ ಲಿಪಿ ಕಲಿತ ಮೇಲೆ ಬೇರೆಯವರಿಗೆ ಕಲಿಸಿದರೆ ತುಳುವಿಗೆ ಮಾನ್ಯತೆ ಸಿಕ್ಕಿದಂತೆ ಎಂದರು.

ವೇದಿಕೆಯಲ್ಲಿ ಮೂಕಾಂಬಿಕಾ ಸೇವಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ, ಜೈ ತುಳುನಾಡ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅವಿನಾಶ್ ಮುಕ್ಕ, ಮೂಕಾಂಬಿಕ ಮಹಿಳಾ ಮಂಡಲ ದ ಅಧ್ಯಕ್ಷೆ ಚಿತ್ರಾ ಶೆಟ್ಟಿ ತಾಳಿಪಾಡಿ ಗುತ್ತು, ಲಿಪಿ ಶಿಕ್ಷಕರಾದ ಕಿರಣ್ ತುಳುವೆ, ದೀಕ್ಷಿತಾ ಮದ್ಯ ಉಪಸ್ಥಿತರಿದ್ದರು.

ಲಿಪಿ ಶಿಕ್ಷಕ ಕಿರಣ್ ತುಳುವ ಲಿಪಿ ಬರೆಯುವ ಮುಖೇನ ಕಾರ್ಯಾಗಾರ ಕ್ಕೆ ಚಾಲನೆ ನೀಡಿದರು. ಗೀತಾ ಲಕ್ಷ್ಮಿಶ್ ಕಾರ್ಯಕ್ರಮ ನಿರೂಪಿಸಿದರು.

ಸುಮಾರು 30 ಮಂದಿ ಮಕ್ಕಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Edited By :
Kshetra Samachara

Kshetra Samachara

24/08/2022 09:26 am

Cinque Terre

5.94 K

Cinque Terre

0

ಸಂಬಂಧಿತ ಸುದ್ದಿ