ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ: ಉರ್ದು ಶಾಲೆ ಜಲಾವೃತ

ಕಾಪು: ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ. ಕಾಪು ತಾಲೂಕಿನ ಮಲ್ಲಾರು ಸರಕಾರಿ ಸಂಯುಕ್ತ ಉರ್ದು ಶಾಲೆ ಜಲಾವೃತಗೊಂಡಿದ್ದು, ಶಾಲೆ ಹಂಚುಗಳಿಗೆ ಹಾನಿಯಾಗಿದೆ. ಸೋರಿಕೆಯಿಂದ ತರಗತಿಗೆ ನೀರು ನುಗ್ಗಿದ್ದು ಸ್ಥಳೀಯ ಪುರಸಭಾ ಸದಸ್ಯ ನೂರುದ್ದೀನ್ ಸಹಿತ ಸ್ಥಳೀಯರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಇದೇ ವೇಳೆ ಜಿಲ್ಲೆಯ ಉಡುಪಿ, ಕಾರ್ಕಳ ,ಕುಂದಾಪುರ ,ಬ್ರಹ್ಮಾವರ, ಪಡುಬಿದ್ರೆ ಮುಂತಾದಡೆಗಳಲ್ಲೂ ಭಾರಿ ಮಳೆ ಆಗುತ್ತಿದ್ದು ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಇನ್ನೆರಡು ದಿನ ಇದೇ ರೀತಿ ಮಳೆ ಮುಂದುವರಿಯಲಿದೆ.

Edited By :
PublicNext

PublicNext

30/06/2022 04:35 pm

Cinque Terre

38.31 K

Cinque Terre

0

ಸಂಬಂಧಿತ ಸುದ್ದಿ