ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಮಲ್ಲಾರು ಸರಕಾರಿ ಉರ್ದು ಶಾಲೆಗೆ ನುಗ್ಗಿದ ಮಳೆನೀರು!; ವಿದ್ಯಾರ್ಥಿಗಳು ಆವರಣದಲ್ಲಿ ಜಮಾವಣೆ

ಭಾರೀ ಮಳೆಯಿಂದಾಗಿ ಮಲ್ಲಾರು ಸರಕಾರಿ ಉರ್ದು ಸಂಯುಕ್ತ ಪ್ರೌಢಶಾಲೆಯ ಕೊಠಡಿಯೊಳಗೆ‌ ನೀರು ಸಂಗ್ರಹಗೊಂಡಿದ್ದು, ವಿದ್ಯಾರ್ಥಿಗಳು ತರಗತಿಯಲ್ಲಿ ಕೂರಲು ಹೆದರುವಂತಾಗಿದೆ.

ನಿರಂತರ ಗಾಳಿ-ಮಳೆಯಿಂದಾಗಿ ಮೇಲ್ಚಾವಣಿಯ ಒಳಗಿನಿಂದ ಮತ್ತು ಬಿರುಕು ಬಿಟ್ಟಿರುವ ಗೋಡೆಯಿಂದ ಮಳೆನೀರು ಒಳಗೆ ಬರುತ್ತಿದ್ದು, ಕಟ್ಟಡ ಕುಸಿತದ ಭೀತಿ ಎದುರಿಸುತ್ತಿದೆ! ವಿದ್ಯಾರ್ಥಿಗಳು ಹೆದರಿಕೆಯಿಂದ ಶಾಲೆಯ ಹೊರಗೆ ಕುಳಿತುಕೊಳ್ಳುವಂತಾಗಿದೆ.

ಈ ಬಗ್ಗೆ ಸ್ಥಳೀಯಾಡಳಿತ ಹಾಗೂ ಶಿಕ್ಷಣ ಕಚೇರಿಯ ಅಧಿಕಾರಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Edited By :
PublicNext

PublicNext

30/06/2022 07:48 pm

Cinque Terre

77.77 K

Cinque Terre

0

ಸಂಬಂಧಿತ ಸುದ್ದಿ