ಪಡುಬಿದ್ರಿ: ಇಲ್ಲಿನ ಕಲ್ಸಂಕ ಬಳಿ ಹೆದ್ದಾರಿಯ ಸುಮಾರು 500 ಮೀ. ಪ್ರದೇಶ ಸಂಪೂರ್ಣ ಹದಗೆಟ್ಟಿದ್ದು, ಸಂಚರಿಸುವುದೇ ದುಸ್ತರ. ಮಳೆಗಾಲದಲ್ಲಂತೂ ಹೊಂಡಮಯವಾಗುತ್ತದೆ. ಆದರೆ, ಈಗ ರಸ್ತೆ ಧೂಳುಮಯ ಆಗಿರುವುದರಿಂದ ಸಂಚಾರವೇ ಅಸಾಧ್ಯ ಎಂಬಂತಾಗಿದೆ.
ಈ ಹೆದ್ದಾರಿಯನ್ನು ಗುತ್ತಿಗೆದಾರ ಕಂಪನಿ 15 ದಿನದಲ್ಲಿ ಸುಸ್ಥಿತಿಗೆ ತರದಿದ್ದಲ್ಲಿ ಎಲ್ಲಾ ಸಂಘ ಸಂಸ್ಥೆಗಳನ್ನು ಒಟ್ಡು ಸೇರಿಸಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಉಡುಪಿ ಜಿ ಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಎಚ್ಚರಿಸಿದ್ದಾರೆ.
ಅವರು ಈ ಸಂದರ್ಭ ಮಾತನಾಡಿ, ಪ್ರತಿ ವಾಹನಗಳಿಂದ ಟೋಲ್ ಪಡೆಯುವ ನವಯುಗ ಕಂಪನಿ ಕೋಟ್ಯಂತರ ರೂ. ಲಾಭ ಪಡೆಯುತ್ತಿದೆ. ಮೊದಲಿಗೆ ನಮ್ಮಲ್ಲಿ ಹಣ ಇಲ್ಲ, ಟೋಲ್ ಕಲೆಕ್ಷನ್ ಮಾಡಲು ಬಿಡಿ ಎಂದಾಗ ಸರಕಾರ ಟೋಲ್ ಕಲೆಕ್ಷನ್‍ಗೆ ಅವಕಾಶ ನೀಡಿತ್ತು. ಆದರೆ, ಕೋಟ್ಯಂತರ ರೂ. ಲಾಭ ಪಡೆಯುತ್ತಿದ್ದರೂ ರಸ್ತೆ ರಿಪೇರಿ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
03/10/2020 12:52 pm