ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಈ ದೇಶದಲ್ಲಿ ಧರ್ಮದ ಮೇಲಿನ ನಂಬಿಕೆ ಮುಖ್ಯ: ಕಲ್ಲಡ್ಕ ಪ್ರಭಾಕರ ಭಟ್

ಕಾಪು: ಈ ದೇಶದಲ್ಲಿ ನಮ್ಮ ನಡವಳಿಕೆ ಧರ್ಮದ ಆಧಾರದ ಮೇಲೆಯೇ ನಡೆಯುತ್ತದೆ. ಧರ್ಮ ಅಂದರೆ ಸಾಮಾನ್ಯ ಜನರಿಗೆ ಏನೆಂದು ತಿಳಿಯುವುದಿಲ್ಲ.ಅದಕ್ಕಾಗಿ ಭಗವಂತನಲ್ಲಿ ನಂಬಿಕೆ ಇಟ್ಟು ನಮ್ಮೆಲ್ಲ ಕೆಲಸಗಳನ್ನು ಮಾಡಿಸುತ್ತೇವೆ. ಕಾಪು ಮಾರಿಗುಡಿ ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಲಕ್ಷಾಂತರ ಜನರಿಗೆ ತಾಯಿ ಅನುಗ್ರಹಿಸಿದ್ದಾಳೆ‌.ತಾಯಿಯ ಅನುಗ್ರಹದ ಆಧಾರದ ಮೇಲೆ ಜನರ ಜೀವನ ಚೆನ್ನಾಗಿ ನಡೆಯುತ್ತಿದೆ. ದೇವಳದ ಜೀರ್ಣೋದ್ಧಾರಕ್ಕೆ ಇಲ್ಲಿನ ಭಕ್ತಸಮೂಹ ಮೊದಲ ಹಂತದಲ್ಲಿ 30 ಕೋಟಿ ಅಂದಾಜು ವೆಚ್ಚದಲ್ಲಿ ಬಾಗಲಕೋಟೆಯ ಇಲ್ಕಲ್ ಕೆಂಪು ಶಿಲೆಯಿಂದ ತುಂಬ ಸುಂದರವಾದ ದೇವಳವನ್ನು ನಿರ್ಮಿಸುತ್ತಿದ್ದಾರೆ.

ಅದಕ್ಕೆ ಬೇಕಾದಂತಹ ಶಕ್ತಿ-ಸಾಮರ್ಥ್ಯ ಎಲ್ಲಾ ರೀತಿಯ ಸಂಪತ್ತು ಒದಗಿ ಬರಲಿ, ತಾಯಿಯ ಕೃಪಾಕಟಾಕ್ಷ ಎಲ್ಲರ ಮೇಲಿರಲಿ ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ಅವರು ವಾರ್ಷಿಕ ಹೂವಿನ ಪೂಜೆಯ ಪ್ರಯುಕ್ತ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದರು.

ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿಯ ವತಿಯಿಂದ ಮಾರಿಯಮ್ಮನಲ್ಲಿ ಪ್ರಾರ್ಥಿಸಿ ದೇವಳದ ತಂತ್ರಿಗಳಾದ ಕುಮಾರಗುರು ತಂತ್ರಿ ಮತ್ತು ಅರ್ಚಕರಾದ ಕಲ್ಯಾ ಶ್ರೀನಿವಾಸ ತಂತ್ರಿಯವರು ಶ್ರೀ ದೇವಿಯ ಅನುಗ್ರಹ ಪ್ರಸಾದ ನೀಡಿದರು. ನಂತರ ಜೀರ್ಣೋದ್ದಾರ ಗೊಳ್ಳುತ್ತಿರುವ ದೇವಳದ ಕಾಮಗಾರಿಯನ್ನು ಕಲ್ಲಡ್ಕ ವೀಕ್ಷಿಸಿದರು.

Edited By : Somashekar
Kshetra Samachara

Kshetra Samachara

08/09/2022 01:14 pm

Cinque Terre

8.21 K

Cinque Terre

0

ಸಂಬಂಧಿತ ಸುದ್ದಿ