ಬ್ರಹ್ಮಾವರ: ಸಾಲಿಗ್ರಾಮ ಪಟ್ಟಣ ಪಂಚಾಯತ್ ಆಶ್ರಯದಲ್ಲಿ ಇಲ್ಲಿನ ಸಭಾಂಗಣದಲ್ಲಿ ಇಂದು ಪೌರಕಾರ್ಮಿಕರ ದಿನಾಚರಣೆ ಜರಗಿತು.
ಪ.ಪಂ. ಅಧ್ಯಕ್ಷೆ ಸುಲತಾ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೌರಕಾರ್ಮಿಕರು ಆಡಳಿತ ವ್ಯವಸ್ಥೆಯ ಪ್ರಮುಖ ಅಂಗವಾಗಿದ್ದಾರೆ. ಯಾವುದೇ ನೌಕರರು ಕೆಲಸ ಸ್ಥಗಿತಗೊಳಿಸಿದರು ಒಂದಷ್ಟು ದಿನ ತಡೆದುಕೊಳ್ಳಬಹುದು. ಆದರೆ ಪೌರಕಾರ್ಮಿಕರು ಒಂದೇ-ಒಂದು ದಿನ ಕೆಲಸ ಮಾಡದಿದ್ದರೂ ಊರಿನ ಚಿತ್ರಣವೇ ಬದಲಾಗುತ್ತದೆ ಎಂದರು ಹಾಗೂ ಪಟ್ಟಣ ಪಂಚಾಯತ್ ಪೌರಕಾರ್ಮಿಕರ ಹಿತರಕ್ಷಣೆಗೆ ಸದಾ ಬದ್ಧವಿದೆ ಎನ್ನುವ ಭರವಸೆ ನೀಡಿದರು.
ಪೌರಕಾರ್ಮಿಕರ ಪರವಾಗಿ ಶಿವರಾಜ್ ಮಾತನಾಡಿ, ಪ್ರತಿಯೊಬ್ಬರು ಪೌರಕಾರ್ಮಿಕರಿಗೆ ಗೌರವ ನೀಡಬೇಕು ಹಾಗೂ ಜನಪ್ರತಿನಿಧಿಗಳು ನಮ್ಮ ನೋವು-ನಲಿವುಗಳಿಗೆ ಸ್ಪಂದಿಸಬೇಕು ಎಂದರು.
ಈ ಸಂದರ್ಭ ಉತ್ತಮ ಸೇವೆ ನೀಡಿದ ಪೌರಕಾರ್ಮಿಕರನ್ನು ಸಮ್ಮಾನಿಸಿ, ಗೌರವಿಸಲಾಯಿತು.
ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವ ದೇವಾಡಿಗ, ಉಪಾಧ್ಯಕ್ಷೆ ಅನುಸೂಯ ಹೇರ್ಳೆ ಶುಭ ಹಾರೈಸಿದರು.
ಮುಖ್ಯಾಧಿಕಾರಿ ಶಿವ ನಾಯ್ಕ್, ಸದಸ್ಯ ಕಾರ್ಕಡ ರಾಜು ಪೂಜಾರಿ, ಸುಕನ್ಯಾ ಶೆಟ್ಟಿ, ರೇಖಾ ಕೇಶವ, ಗಿರಿಜಾ ಪೂಜಾರಿ, ಕರುಣಾಕರ ಪೂಜಾರಿ ಹಾಗೂ ಪೌರಕಾರ್ಮಿಕರ ಪ್ರತಿನಿಧಿ ಪ್ರದೀಪ್ ಹಾಗೂ ಪ.ಪಂ. ಸಿಬಂದಿಗಳು ಉಪಸ್ಥಿತರಿದ್ದರು.
ಆರೋಗ್ಯಾಧಿಕಾರಿ ಮಮತಾ ಸ್ವಾಗತಿಸಿ, ಚಂದ್ರಶೇಖರ್ ಸೋಮಯಾಜಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
23/09/2021 09:02 pm