ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಪುರಸಭಾ ವ್ಯಾಪ್ತಿಯಲ್ಲಿ ತಲೆಯೆತ್ತಿ ನಿಂತ ಅಕ್ರಮ ಕಟ್ಟಡಗಳು

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಾದ್ಯಂತ ಸರ್ಕಾರಿ ಭೂಮಿಯಲ್ಲಿ, ರಸ್ತೆ ಹಾಗೂ ಚರಂಡಿಗಳನ್ನು ಬಿಡದೆ ಅಕ್ರಮ ಮನೆ, ವಾಣಿಜ್ಯ ಕಟ್ಟಡ, ಇನ್ನಿತರ ಮಳಿಗೆ, ವಸತಿಗಳು ನಿರ್ಮಾಣ ಆಗುತ್ತಲೇ ಇವೆ.

ಹಳೆಯ ಕಟ್ಟಡ ದುರಸ್ತಿ ಹೆಸರಿನಲ್ಲಿ ಅಕ್ರಮವಾಗಿ ಹೊಸ ಕಟ್ಟಡ, ಮನೆ ಇನ್ನಿತರ ಅಂಗಡಿ ಕೋಣೆಗಳು ನಿರ್ಮಾಣ ಮಾಡುತ್ತಲೇ ಇರುವ ಕುಂದಾಪುರ ಭಾಗದ ಪ್ರಭಾವಿ ವ್ಯಕ್ತಿಗಳು ಇದಕ್ಕೆ ಮುಖ್ಯ ಕಾರಣವಾಗಿದ್ದಾರೆ ಎನ್ನಲಾಗಿದೆ.

ಕುಂದಾಪುರ ಪುರಸಭೆಯಲ್ಲಿ ಇಂತಹ ಅಕ್ರಮ ಕಟ್ಟಡಗಳಿಗೆ ರಾಜಾರೋಷವಾಗಿ ಅವಕಾಶ ಕಲ್ಪಿಸಲಾಗುತ್ತಿದೆ. ಒಂದು ಕ್ರಿಯಾ ಯೋಜನೆಗೆ ತೆಗೆದುಕೊಂಡ ಅನುಮತಿಯನ್ನು ಉದ್ದೇಶಪೂರ್ವಕವಾಗಿ ಮತ್ತೊಂದು ಯೋಜನೆಗೆ ಪುರಸಭೆ ಮತ್ತು ರಾಜಕೀಯ ಅಧಿಕಾರದ ಪ್ರಭಾವದಿಂದ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಎಂದು ಸಾಮಾಜಿಕ ಹೋರಾಟಗಾರ, ಪತ್ರಕರ್ತ ಕಿರಣ್ ಪೂಜಾರಿ ಕುಂದಾಪುರ ಆರೋಪಿಸಿದ್ದಾರೆ.

ಕುಂದಾಪುರ ಪುರಸಭೆಯ ವಸತಿ ಆಸ್ತಿ ಸಂಖ್ಯೆ 101/11 ರಲ್ಲಿ, ಶ್ರೀ ಗೋಪಾಲ ಕೃಷ್ಣ ನಾಯಕ್ ಅವರು ಒಂದು ದೊಡ್ಡ ಅಕ್ರಮ ಮನೆ ನಿರ್ಮಿಸಿದ್ದಾರೆ. ದಾಖಲೆಗಳ ಪ್ರಕಾರ ಅವರು ಹಳೆಯ ವಸತಿ ನಿರ್ಮಾಣವನ್ನು ನವೀಕರಿಸಲು ಅನುಮತಿ ತೆಗೆದುಕೊಂಡಿದ್ದಾರೆ. ಹಳೆಯ ಕಟ್ಟಡ ದುರಸ್ತಿ ಮಾಡದೇ ಅದರ ಪಕ್ಕದಲ್ಲಿಯೇ ಹೊಸ ಮನೆ ಕಟ್ಟಿರುವುದು ಯಾವ ನ್ಯಾಯ? ಯಾವ ನಿಯಮದಡಿಯಲ್ಲಿ ಎಂದು ಸಾರ್ವಜನಿಕರಿಗೆ ಪುರಸಭಾ ಮುಖ್ಯಾಧಿಕಾರಿ ಉತ್ತರ ನೀಡಬೇಕಿದೆ.

ಪಿತ್ರಾರ್ಜಿತ ಆಸ್ತಿ ವಿಠಲ್ ನಾಯಕ್ ಅವರ ಇತರ ಮಕ್ಕಳಿಗೂ ಸೇರಿದೆ. ಮತ್ತು ಎಲ್ಲರೂ ಜಂಟಿ ಮಾಲೀಕರು ಎಂದು ದಾಖಲೆ ಹೇಳುತ್ತದೆ. ಗೋಪಾಲ ಕೃಷ್ಣ ನಾಯಕ್ ಅವರು ಹೊಸ ಮನೆ ನಿರ್ಮಾಣಕ್ಕೆ ಕುಟುಂಬದ ಇತರ ಎಲ್ಲ ಸದಸ್ಯರಿಂದ ಯಾವುದೇ NOC ಅಥವಾ ಅಧಿಕಾರವನ್ನು ಪಡೆದಿಲ್ಲ. ಪುರಸಭೆಯ ನಿಯಮಗಳ ಪ್ರಕಾರ ಸೆಟ್ ಬ್ಯಾಕ್, ಒಳಚರಂಡಿ ಸಂಪರ್ಕ, ತ್ಯಾಜ್ಯ ನಿರ್ವಹಣೆ, ಆಸ್ತಿ ಹಕ್ಕುಗಳು, ನಿರ್ಮಾಣ ಮಾನದಂಡಗಳನ್ನು ಸಂಪೂರ್ಣ ಗಾಳಿಗೆ ತೂರಿ ಇಂತಹ ಅಕ್ರಮ ಕಟ್ಟಡಗಳಿಗೆ ಅವಕಾಶ ನೀಡುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತು ಗೋಪಾಲ್ ಕೃಷ್ಣ ನಾಯಕ್ ನಿರ್ಮಿಸಿದ ಅಕ್ರಮ ಮನೆಯನ್ನು ತೆರವುಗೊಳಿಸಬೇಕು. ತಪ್ಪಿದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಗಣೇಶ್ ಕಾಮತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

29/03/2022 09:10 pm

Cinque Terre

9.14 K

Cinque Terre

1

ಸಂಬಂಧಿತ ಸುದ್ದಿ