ಹೊನ್ನಾವರದಲ್ಲಿ ಇತ್ತೀಚೆಗೆ ತಂಡವೊಂದು " ನಾವು ವೃದ್ಧಾಶ್ರಮ, ಅನಾಥಾಶ್ರಮಗಳಿಂದ ಬಂದಿದ್ದೇವೆ" ಎಂದು ಹೇಳಿಕೊಂಡು ಸಾಕಷ್ಟು ಅಹಾರ ವಸ್ತು, ಬಟ್ಟೆ, ಹಣ ಸಂಗ್ರಹಿಸಿ, ಬಳಿಕ ವಂಚನೆ ಎಸಗಿ ಪರಾರಿಯಾದ ಘಟನೆ ನಡೆದಿದೆ.
ಎರಡು ಓಮ್ನಿ ಕಾರುಗಳಲ್ಲಿ ಮಕ್ಕಳೊಂದಿಗೆ ಹೆಂಗಸರು-ಗಂಡಸರ ತಂಡ ಹೊನ್ನಾವರ ಪೇಟೆ ಪ್ರದೇಶದಲ್ಲಿ ಬಂದಿಳಿದಿದೆ. ಅನಂತರ, ಪಟ್ಟಣ ಸಹಿತ ಪರಿಸರದ ಸುತ್ತಮುತ್ತಲಿನ ಮನೆ-ಮನೆಗೆ ತೆರಳಿ ವೃದ್ಧಾಶ್ರಮ, ಅನಾಥಾಲಯಗಳಿಗೆ ನೀಡಬೇಕಿದೆ ಎಂದು ಅಕ್ಕಿ ಸಹಿತ ನಾನಾ ಬೇಳೆ ಸಾಮಗ್ರಿ, ಬಟ್ಟೆಬರೆ ಹಾಗೂ ಹಣ ಸಂಗ್ರಹಿಸಿದ್ದಾರೆ.
ಆದರೆ, ಮರುದಿನ ಈ ತಂಡ ಹೀಗೆ ಸಂಗ್ರಹಿಸಿದ್ದ ಬಟ್ಟೆಗಳನ್ನು ಮೂಟೆ ಕಟ್ಟಿ, ಹೊನ್ನಾವರ ಪಟ್ಟಣ ಸಮೀಪದ ಮರಗಿಡಗಳ ಪೊದೆಗಳಲ್ಲಿ ಎಸೆದು ಹೋಗಿದ್ದಾರೆ!
ಸಹೃದಯ ಜನರು ಈ ರೀತಿ ಮಾನವೀಯ ಅಂತ:ಕರಣ, ಕರುಣೆಯಿಂದ ಕೊಟ್ಟ ಈ ಅಗತ್ಯ ವಸ್ತುವನ್ನು ಹೇಗೆ ಈ ಅಮಾನವೀಯರು ಒಗೆದು ಹೋಗಿದ್ದಾರೆ ನೋಡಿ.
ತಂಡದ ಕುಕೃತ್ಯದ ಕುರಿತು ಈ ವೀಡಿಯೊದಲ್ಲಿ ಹೊನ್ನಾವರದ ಸಾಮಾಜಿಕ ಕಾಳಜಿಯ ನಿವಾಸಿಯೊಬ್ಬರು ಸವಿವರವಾಗಿ ಮಾಹಿತಿ ನೀಡಿದ್ದಾರೆ.
Kshetra Samachara
24/09/2020 04:03 pm