ಮಂಗಳೂರು: ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 5 ರೂ. ಮತ್ತು 7 ರೂ. ಕಡಿತಗೊಳಿಸಿದೆ. ಕರ್ನಾಟಕ ಸರಕಾರ ಸಹ ಪ್ರತ್ಯೇಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯಲ್ಲಿ ತಲಾ 7 ರೂ. ಕಡಿತಗೊಳಿಸಿದೆ. ಆದ್ರೆ, ಕೇರಳ ಸೇರಿದಂತೆ ಬಿಜೆಪಿಯೇತರ ಸರಕಾರಗಳು ಪ್ರತ್ಯೇಕ ಇಂಧನ ತೆರಿಗೆ ಕಡಿತಗೊಳಿಸಿಲ್ಲ. ಹೀಗಾಗಿ ಕೇರಳ- ಕರ್ನಾಟಕ ನಡುವೆ ತೈಲ ದರದಲ್ಲಿ ಭಾರಿ ಅಂತರ ಕಂಡು ಬಂದಿದ್ದು, ಕೇರಳಿಗರು ಕರ್ನಾಟಕಕ್ಕೆ ಬಂದು ವಾಹನಗಳಿಗೆ ಫುಲ್ ಟ್ಯಾಂಕ್ ಇಂಧನ ಹಾಕಿಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದ ಎಲ್ಲ ಪೆಟ್ರೋಲ್ ಬಂಕ್ ಗೂ ಕೇರಳಿಗರು ಬರ್ತಿದ್ದಾರೆ. ಕರ್ನಾಟಕದ ಪೆಟ್ರೋಲ್ ಬಂಕ್ ಗಳಲ್ಲಿ ಕೇರಳಕ್ಕಿಂತ ಕಡಿಮೆ ದರದಲ್ಲಿ ಪೆಟ್ರೋಲ್ ಡೀಸೆಲ್ ಸಿಗುತ್ತಿದ್ದು, ಪೆಟ್ರೋಲ್ ಗೆ 5 ರೂ., ಡೀಸೆಲ್ ಗೆ 8 ರೂ. ಅಂತರವಿದೆ. ಇನ್ನು ದರ ವ್ಯತ್ಯಾಸದಿಂದ ಗಡಿ ಭಾಗ ಕಾಸರಗೋಡು ಜಿಲ್ಲೆಯ ಪಂಪ್ ಗಳಲ್ಲಿ ಇಂಧನ ಮಾರಾಟದಲ್ಲಿ ಕುಸಿತವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದ ಪೆಟ್ರೋಲ್ ಬಂಕ್ ಗಳಿಗೆ ಹೆಚ್ಚಿನ ಆದಾಯ ಬರುತ್ತಿದೆ.
Kshetra Samachara
19/11/2021 09:57 am