ಮಣಿಪಾಲ: ಸುಡುಬಿಸಿಲ ಧಗೆಯ ವಾತಾವರಣದಲ್ಲಿ ಚಾಮರ ಬೀಸುತ್ತಾ ತಂಗಾಳಿ ಪಸರಿಸುತ್ತಿದ್ದ ಹತ್ತಕ್ಕೂ ಅಧಿಕ ಮರಗಳನ್ನು ಕಡಿದುರುಳಿಸುವ ಅಮಾನವೀಯ ಕೃತ್ಯ ಮಣಿಪಾಲ ಹುಡ್ಕೋ ಕಾಲೊನಿ ಸಮೀಪದ ಸರಕಾರಿ ಸ್ಥಳದಲ್ಲಿ ನಡೆದಿದೆ.
ಈ ಸ್ಥಳದಲ್ಲಿ ಉದ್ಯಾನವನ ನಿರ್ಮಾಣ ಕಾಮಗಾರಿ ನಡೆಸಲು ಮರಗಳಿಗೆ ಕೊಡಲಿ ಏಟು ನೀಡಲಾಗುತ್ತಿದೆ. ಇವೆಲ್ಲ ಸ್ಥಳೀಯರು ಗಿಡಗಳನ್ನು ನೆಟ್ಟು, ನೀರುಣಿಸಿ ಬೆಳೆಸಿದ ಮರಗಳು. ಪರಿಸರ ರಕ್ಷಿಸಿ ಎನ್ನುವ ಜಾಗೃತಿಯ ಕೂಗು ಕೇಳಿಬರುತ್ತಿರುವ ಈ ಸಮಯದಲ್ಲಿ, ಮರಗಳು ಹತ್ಯೆಗೊಳಗಾದರೂ ಆಡಳಿತ ವ್ಯವಸ್ಥೆ ಮೌನವಾಗಿರುವುದು ವಿಪರ್ಯಾಸ.
ವೃಕ್ಷಗಳ ಹತ್ಯೆಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಹಾಗೂ ಪರಿಸರಪ್ರೇಮಿ ಗುರುರಾಜ್ ಆಚಾರ್ಯ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತ,ಅರಣ್ಯ ಇಲಾಖೆ, ಪರಿಸರದ ನಾಶ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಇನ್ನು ಉಳಿದಿರುವ ಮರಗಳ ಕಟಾವಿಗೆ ತಡೆಯೊಡ್ಡಬೇಕೆಂದು ಅವರು ಕಳಕಳಿಯಿಂದ ವಿನಂತಿಸಿಕೊಂಡಿದ್ದಾರೆ.
Kshetra Samachara
14/12/2020 03:18 pm