ಮುಲ್ಕಿ: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅರ್ಕುಳ ತುಪ್ಪೆಕಲ್ಲು ಬೋರುಗುಡ್ಡೆಯಲ್ಲಿರುವ ಕಾರ್ಯಕರ್ತನೊಬ್ಬನ ತಾಯಿಯ ಚಿಕಿತ್ಸೆಗಾಗಿ ಸಂಪರ್ಕ ರಸ್ತೆ ಮಾಡಿ ಕೊಡುವ ಭರವಸೆಯನ್ನು ಶಾಸಕ ಡಾ. ಭರತ್ ಶೆಟ್ಟಿ ಈಡೇರಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ಸದಾ ಶ್ರಮವಹಿಸಿ ಕೆಲಸ ಮಾಡುತ್ತಿದ್ದ.
ಮನೆಯವರೆಲ್ಲಾ ಆರೋಗ್ಯವಂತರಾಗಿದ್ದ ಸಂದರ್ಭ ಒಂದು ರಸ್ತೆ ಸಮಸ್ಯೆ ಸಮಸ್ಯೇ ಅಲ್ಲ ಎಂದು ಎಣಿಸಿರಬೇಕು.
ಆದರೆ ತಾಯಿ ಅನಾರೋಗ್ಯ ಪೀಡಿತರಾದಾಗ ಅವರ ಚಿಕಿತ್ಸೆಗೆ ಕರೆದುಕೊಂಡು ಹೋಗಲು ರಿಕ್ಷವೂ ಬರದ ಸ್ಥಿತಿಯಲ್ಲಿತ್ತು ಮನೆಯ ಸಮೀಪದ ರಸ್ತೆ!!
ಸ್ಥಳೀಯ ಹನುಮಾನ್ ಸೇವಾ ಸಂಘ ಈ ಬಗ್ಗೆ ಶಾಸಕ ಡಾ. ಭರತ್ ಶೆಟ್ಟಿ ಗಮನ ಸೆಳೆದದ್ದೇ ತಡ.ಸಂಪರ್ಕ ರಸ್ತೆಯನ್ನು ಅಗಲೀಕರಣಗೊಳಿಸಿ ಆಟೋ,ಕಾರು ಬರುವ ಹಾಗೇ ಮಾಡಿ ನಿತ್ಯ ಚಿಕಿತ್ಸೆಗೆ ತೆರಳಲು ವ್ಯವಸ್ಥೆ ಮಾಡಿದರು.
ಶಾಸಕರು ನುಡಿದಂತೆ ರಸ್ತೆ ಪೂರ್ಣಗೊಂಡಿದ್ದು ಇಂದು ಕಾರ್ಯಕರ್ತನ ಮನೆಗೆ ಭೇಟಿ ನೀಡಿ ತಾಯಿಯ ಆರೋಗ್ಯ ವಿಚಾರಿಸಿದರು.ಹಲವಾರು ವರ್ಷಗಳಿಂದ ಈ ರಸ್ತೆಗೆ ಅನೇಕ ಅಡೆತಡೆಗಳು ಇದ್ದು ಮಾನ್ಯ ಶಾಸಕರ ಮುತುವರ್ಜಿಯಿಂದ ಈ ಕೆಲಸ ಪೂರ್ಣಗೊಂಡಿದ್ದು ಇದೀಗ ಶಾಸಕರ ಕ್ಷಿಪ್ರ ಸ್ಪಂದನೆ ಬಿಜೆಪಿ ಕಾರ್ಯಕರ್ತರಲ್ಲಿ ಹಾಗೂ ಸ್ಥಳೀಯರಲ್ಲಿ ಶಾಸಕರ ಮೇಲಿನ ಅಭಿಮಾನ, ಗೌರವ ಮತ್ತಷ್ಟು ಹೆಚ್ಚಾಗಿದೆ. ಶಾಸಕರು,ಇದಕ್ಕೆ ಸಹಕರಿಸಿದ ಹನುಮಾನ್ ಸೇವಾ ಸಂಘದ ಸದಸ್ಯರುಗೂ ಕೃತಜ್ಞತೆ ಎನ್ನುತ್ತಾರೆ ಸ್ಥಳೀಯರು.
Kshetra Samachara
27/11/2020 12:00 pm