ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆದ್ದಾರಿ ಬದಿ ಕಾಂಕ್ರೀಟ್ ಮಿಕ್ಸಿಂಗ್ ಮೆಷಿನ್ ತೆರವು; ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ

ಮುಲ್ಕಿ: ಮುಲ್ಕಿ -ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಅಂಗರಗುಡ್ಡೆ ಬಳಿ ಕಳೆದ ನಾಲ್ಕು ದಿನಗಳಿಂದ ಕಾಂಕ್ರೀಟ್ ಮಿಕ್ಸಿಂಗ್ ಮೆಷಿನ್ ನನ್ನುಮಾಲೀಕ ಬಿಟ್ಟುಹೋಗಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಪಬ್ಲಿಕ್ ನೆಕ್ಸ್ಟ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮಾಲೀಕರ ಗಮನ ಸೆಳೆಯಲಾಗಿದ್ದು ಕೂಡಲೇ ಎಚ್ಚೆತ್ತ ಕಾಂಕ್ರೀಟ್ ಮೆಷಿನ್ ಸ್ಥಳದಿಂದ ತೆರವುಗೊಳಿಸಲಾಗಿದೆ.

ಕಳೆದ ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ

"ನನ್ನ ಯಜಮಾನರು ನನ್ನ ಕಾಲು ಮುರಿದಿರುವ ಕಾರಣಕ್ಕೆ ನನ್ನನ್ನು ಅಂಗರಗುಡ್ಡೆ ಬಸ್ ನಿಲ್ದಾಣದ ಬಳಿ ಸುಮಾರು 4 ದಿನದಿಂದ ಬಿಟ್ಟು ಹೋಗಿದ್ದಾರೆ.

ನನ್ನನ್ನು ದುಡಿಯುವ ಸಮಯದಲ್ಲಿ ದುಡಿಸಿ, ಈಗ ನನ್ನ ಕಾಲು ಮುರಿದ ಒಂದೇ ಕಾರಣಕ್ಕೆ ಇಲ್ಲಿ ಇರಬೇಕಾಗಿದೆ.

ರಾತ್ರಿ ಚಲಿಸುವ ವಾಹನ ಎಲ್ಲಿ ನನ್ನ ಮೇಲೆ ಮಂದ ಬೆಳಕಿನಲ್ಲಿ ಅಪ್ಪಲಿಸುವ ಭಯದಲ್ಲಿ ನಾನು ಇದ್ದೇನೆ. ಹಬ್ಬದ ದಿನವಾದರೂ ನನ್ನನ್ನು ಮನೆಗೆ ಮುಟ್ಟಿಸುವ ಜವಾಬ್ದಾರಿ ನಿಮ್ಮ ಮೇಲಿದೆ" ಎಂದು ವೈರಲ್ ಆಗಿದ್ದು, ಅಪಾಯ ಸಂಭವಿಸುವ ಮೊದಲು ಈ ಕಾಂಕ್ರೀಟ್ ಮಿಕ್ಸ್ ಮೆಷಿನ್ ನ್ನು ಸ್ಥಳದಿಂದ ತೆರವುಗೊಳಿಸಬೇಕೆಂದು ಸಂಬಂಧಪಟ್ಟವರ ಗಮನ ಸೆಳೆಯಲಾಗಿದ್ದು "ಪಬ್ಲಿಕ್ ನೆಕ್ಸ್ಟ್" ಈ ಬಗ್ಗೆ ವರದಿ ಮಾಡಿತ್ತು. ವರದಿ ಬಗ್ಗೆ ಗಮನಹರಿಸಿ ತೆರವುಗೊಳಿಸಿದ ಕಾಂಕ್ರೀಟ್ ಮೆಷಿನ್ ಮಾಲೀಕರಿಗೆ ಹಾಗೂ ಪಬ್ಲಿಕ್ ನೆಕ್ಸ್ಟ್ ಗೆ ಧನ್ಯವಾದಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Edited By : Nagaraj Tulugeri
Kshetra Samachara

Kshetra Samachara

15/11/2020 07:48 am

Cinque Terre

14.34 K

Cinque Terre

1

ಸಂಬಂಧಿತ ಸುದ್ದಿ