ಬಾರ್ಕೂರು: ರಾಜ್ಯದ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅನುಷ್ಠಾನಗೊಳ್ಳಲಿರುವ ಯಾಂತ್ರೀಕೃತ ಭತ್ತ ಬೇಸಾಯ "ಯಂತ್ರಶ್ರೀ" ಮತ್ತು ಹಡಿಲು ಭೂಮಿ ಪುನಶ್ಚೇತನ ಯೋಜನೆ ಕಾರ್ಯಕ್ರಮಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಬಾರ್ಕೂರಿನಲ್ಲಿ ಚಾಲನೆ ನೀಡಿದರು.
ಬಾರ್ಕೂರಿನ ಪ್ರಗತಿಪರ ಕೃಷಿಕ, ಶ್ರೀನಿವಾಸ ಉಡುಪರ ಭತ್ತದ ಗದ್ದೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭತ್ತದ ಸಸಿಗಳನ್ನು ನಾಟಿ ಯಂತ್ರಕ್ಕೆ ನೀಡಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಶುಭ ಕೋರಿದರು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಿಗೆ ಸನ್ಮಾನ ನಡೆಯಿತು. ಅಲ್ಲದೆ, ಕೃಷಿಯಲ್ಲಿ ಬಳಸಬಹುದಾದ ವಿವಿಧ ನಾಟಿ ಯಂತ್ರಗಳು, ಹಾಗೂ ಭತ್ತದ ಸಸಿಗಳ ಪ್ರಾತ್ಯಕ್ಷಿಕೆ ನಡೆಯಿತು. ಉಡುಪಿ ಜಿಲ್ಲೆಯ ಸಾವಿರಾರು ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಎಲ್ಲ ಹೆತ್ತವರೂ ಮಕ್ಕಳಿಗೆ ತಿನ್ನಿಸುವುದನ್ನು ಕಲಿಸುತ್ತಾರೆ. ಜತೆಗೆ ಕೃಷಿ ಕಾಯಕದ ಮೂಲಕ ನಮ್ಮ ಮಣ್ಣಿನ ಗುಣವನ್ನೂ ತಿಳಿಸಬೇಕು. ಮೊದಲು ಮನೆಯಲ್ಲಿರುವ ಹತ್ತಾರು ಮಕ್ಕಳೇ ಕೃಷಿ ಕೆಲಸಕ್ಕೆ ಸಾಲುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಇರುವ ಇಬ್ಬರು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಊರಿನಿಂದ ಹೊರಗೆ ಕಳುಹಿಸಲಾಗಿದೆ. ಪ್ರಸ್ತುತ ಗ್ರಾಮೀಣ ಭಾಗದಲ್ಲಿ ಕೃಷಿ ಭೂಮಿ ಇದ್ದರೂ ಹಡಿಲು ಬೀಳುವ ಪರಿಸ್ಥಿತಿ ಎದುರಾಗಿದೆ ಎಂದರು.
Kshetra Samachara
29/06/2022 12:36 pm