", "articleSection": "Infrastructure", "image": { "@type": "ImageObject", "url": "https://prod.cdn.publicnext.com/s3fs-public/378325-1737727689-16.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Punith Mulki" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮುಲ್ಕಿ: ಕಿನ್ನಿಗೋಳಿ ಗೋಳಿಜೋರಾ ಸಂಪರ್ಕ ರಸ್ತೆಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಕುಡಿಯುವ ನೀರಿನ ಪೈಪ್‌ಗಳನ್ನು ಅಳವಡಿಸಲಾಗುತ್ತಿದ್ದು ವಾಹನ ಸಂಚ...Read more" } ", "keywords": "Kinnigoli News, School Bus Wheel, Superstition, Unscientific Practice, Bizarre Incident, Dakshina Kannada, Karnataka News, Rural News, School Bus Ritual.,Udupi,Mangalore,Infrastructure", "url": "https://publicnext.com/article/nid/Udupi/Mangalore/Infrastructure" } ಕಿನ್ನಿಗೋಳಿ: ಅವೈಜ್ಞಾನಿಕ ಕಾಮಗಾರಿ - ಮಣ್ಣಿನಲ್ಲಿ ಹೂತು ಹೋದ ಶಾಲಾ ಬಸ್‌ನ ಚಕ್ರ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಅವೈಜ್ಞಾನಿಕ ಕಾಮಗಾರಿ - ಮಣ್ಣಿನಲ್ಲಿ ಹೂತು ಹೋದ ಶಾಲಾ ಬಸ್‌ನ ಚಕ್ರ

ಮುಲ್ಕಿ: ಕಿನ್ನಿಗೋಳಿ ಗೋಳಿಜೋರಾ ಸಂಪರ್ಕ ರಸ್ತೆಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಕುಡಿಯುವ ನೀರಿನ ಪೈಪ್‌ಗಳನ್ನು ಅಳವಡಿಸಲಾಗುತ್ತಿದ್ದು ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿದೆ.

ಕಿನ್ನಿಗೋಳಿ ಗೋಳಿಜೋರಾ ಮೂಲಕ ಪಂಜಿನಡ್ಕಕ್ಕೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆಯ ಬದಿಯಲ್ಲಿ ಕಳೆದ ಕೆಲ ದಿನಗಳಿಂದ ಅವೈಜ್ಞಾನಿಕ ರೀತಿಯಲ್ಲಿ ಕುಡಿಯುವ ನೀರಿನ ಪೈಪಳವಡಿಕೆ ಕಾರ್ಯ ನಡೆಯುತ್ತಿದೆ. ಪೈಪ್ ಅಳವಡಿಕೆ ಸಂದರ್ಭ ಹಿಂದೆ ಇದ್ದ ಕುಡಿಯುವ ನೀರಿನ ಪೈಪಿಗೆ ಹಾನಿಯಾಗಿ ಲಕ್ಷಾಂತರ ಲೀಟರ್ ಮೌಲ್ಯದ ನೀರು ಸೋರಿಕೆಯಾಗುತ್ತಿದೆ ಹಾಗೂ ಪೈಪ್ ಅಳವಡಿಸಲು ಅಗೆದ ಮಣ್ಣನ್ನು ಕಾಂಕ್ರೀಟ್ ರಸ್ತೆಯಲ್ಲಿ ಹಾಕುತ್ತಿದ್ದು ಅನೇಕ ಸಣ್ಣಪುಟ್ಟ ಅಪಘಾತಗಳು ಸಂಭವಿಸಿದೆ.

ಅವೈಜ್ಞಾನಿಕ ಕಾಮಗಾರಿಯಿಂದ ಶುಕ್ರವಾರ ಬೆಳಿಗ್ಗೆ ಸ್ಥಳೀಯ ಶಾಲೆಯ ಬಸ್‌ನ ಚಾಲಕನು ನಿಯಂತ್ರಣ ತಪ್ಪಿ ಕಾಂಕ್ರೀಟ್ ರಸ್ತೆಯಿಂದ ಕೆಳಗೆ ಇಳಿದು ಮಣ್ಣಿನಲ್ಲಿ ಬಸ್ಸಿನ ಚಕ್ರ ಹೂತು ಹೋಗಿ ಬಸ್ ವಾಲಿ ನಿಂತಿದೆ. ಈ ಸಂದರ್ಭ ಸ್ಥಳೀಯರು ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದ ಪರಿಸರ ಧೂಳುಮಯವಾಗಿದ್ದು ಪರಿಸರದ ಜನರ ಆರೋಗ್ಯಕ್ಕೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಯಿಂದ ಕಳೆದ ಹಲವಾರು ವರ್ಷಗಳಿಂದ ಈ ಪರಿಸರಕ್ಕೆ ಬರುತ್ತಿದ್ದ ಕುಡಿಯುವ ನೀರಿನಲ್ಲಿ ವ್ಯತ್ಯಯ ಉಂಟಾಗಿದ್ದು ಕೂಡಲೇ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಮಧ್ಯಪ್ರವೇಶಿಸಿ ಸರಿಪಡಿಸಲು ಗುತ್ತಿಗೆದಾರನಿಗೆ ಸೂಚನೆ ನೀಡಬೇಕು ಎಂದು ನಿವೃತ್ತ ಶಿಕ್ಷಕ ಶಂಕರ್ ಮಾಸ್ತರ್ ಗೋಳಿಜೋರ ಆಗ್ರಹಿಸಿದ್ದಾರೆ.

Edited By : Somashekar
Kshetra Samachara

Kshetra Samachara

24/01/2025 07:38 pm

Cinque Terre

5.11 K

Cinque Terre

0