ಉಡುಪಿ: ಕರಾವಳಿಯ ಜನಪದ ಕ್ರೀಡೆ ಕಂಬಳ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಇರುವೈಲು ಪಾಣಿಲ ಬಾಡ ಪೂಜಾರಿ ಅವರು ವಿಧಿವಶವಾಗಿದ್ದಾರೆ.
ಕಂಬಳ ಕ್ಷೇತ್ರದಲ್ಲಿ ಇವರ ಯಜಮಾನಿಕೆಯ ಕೋಣಗಳು, ಅನೇಕ ಪ್ರಶಸ್ತಿ- ಬಹುಮಾನಗಳನ್ನು ಪಡೆದು ಹೆಸರು ಗಳಿಸಿದ್ದವು. ಸ್ವತಃ ಬಾಡ ಪೂಜಾರಿ ಅವರಿಗೂ ಕೂಡ ಸಾಕಷ್ಟು ಅಭಿಮಾನಿ ಬಳಗ ಇತ್ತು. ಇರುವೈಲು ಪಾಣಿಲ ಬಾಡ ಪೂಜಾರಿ ಅವರ ಕೋಣಗಳನ್ನು ಓಡಿಸಿ ಮಿಜಾರು ಅಶ್ವತಪುರ ಶ್ರೀನಿವಾಸ ಗೌಡ ಅವರು ಪ್ರಸಿದ್ಧಿ ಪಡೆದಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
Kshetra Samachara
11/10/2022 12:31 pm