ಕುಂದಾಪುರ: ಕುಂದಾಪುರ ತಾಲೂಕು ವಕ್ವಾಡಿ ಗ್ರಾಮದ ವಾರಾಹಿ ಕಾಲುವೆಯಲ್ಲಿ ಹೂಳು ತುಂಬಿದ್ದು ಅದನ್ನು ದಾಟುವ ಭರದಲ್ಲಿ ಗೋವುಗಳು ಹೂತು ಹೋದ ಪ್ರಸಂಗ ನಡೆದಿದೆ.ನಿರ್ಮಾಣ ಹಂತದಲ್ಲಿರುವ ಕಾಲುವೆಯಲ್ಲಿ ನಾಲ್ಕು ಅಡಿಗಳಷ್ಟು ಹೂಳು ತುಂಬಿದ್ದು ಈ ಭಾಗದ ಜಾನುವಾರುಗಳ ಕಷ್ಟ ಹೇಳತೀರದು.
ಕಾಲುವೆ ದಾಟಲಾರದೆ ಹೂಳಿನಲ್ಲಿ ಬಿದ್ದು ಒದ್ದಾಡಿದ ಗೋವುಗಳನ್ನು ಸ್ಥಳೀಯರು ಗಮನಿಸಿದ್ದಾರೆ.ಬಳಿಕ ಮೂಕ ಜೀವಿಗಳನ್ನು ಸ್ಥಳೀಯರು ರಕ್ಷಣೆ ಮಾಡಿದರು.ಈ ಭಾಗದ ಜಾನುವಾರುಗಳು ಮೇವಿಗಾಗಿ ಅತ್ತಿಂದಿತ್ತ ಸಂಚರಿಸುವಾಗ ವಾರಾಹಿ ಕಾಲುವೆ ಕಾಮಗಾರಿ ಅಡ್ಡಿಯಾಗಿ ಪರಿಣಮಿಸಿದೆ. ತಕ್ಷಣ ಹೂಳು ತೆರವು ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
06/10/2022 02:38 pm