ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: "ಇಲ್ಲಿ ಹಗಲಲ್ಲೇ ಪ್ರೇತ ಕಾಟ ಶುರು!"; ಸದಾ ಎಚ್ಚರ ಜರೂರು

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಮ್ಮಾಯಿ ನಿವಾಸಿ ದಿವಾಕರ ದೇವಾಡಿಗ ಪ್ರತೀ ದಸರಾ ಸಂದರ್ಭ ತಮ್ಮ ವಿಶೇಷ ವೇಷದ ಮೂಲಕ‌ ಜನಮನ ಸೆಳೆಯುತ್ತಾರೆ.

ಪುತ್ತೂರಿನಲ್ಲಿ ಆಟೋರಿಕ್ಷಾ ಚಾಲಕರಾಗಿ ದುಡಿಯುತ್ತಿರುವ ದಿವಾಕರ್, ನವರಾತ್ರಿ ಬಂತೆಂದರೆ "ಪ್ರೇತ"ವಾಗಿ ಬದಲಾಗುತ್ತಾರೆ. ನವರಾತ್ರಿಯ ಕೊನೆಯ ಮೂರು ದಿನಗಳು ಮಾತ್ರ ಪ್ರೇತದ ವೇಷಧಾರಿಯಾಗುವ ದಿವಾಕರ್, ಅರಚಾಡುತ್ತಾ ಮನೆ- ಮನೆಗೆ, ಅಂಗಡಿ ಮತ್ತಿತರ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿ, ಹಾವಭಾವ ಪ್ರದರ್ಶಿಸಿ ರಂಜಿಸುತ್ತಾರೆ.

ಹಲವು ವರ್ಷಗಳಿಂದ ನವರಾತ್ರಿ ಹಬ್ಬದ ಸಂದರ್ಭದಲ್ಲಿ ವೇಷ ಹಾಕುವುದನ್ನು ಕರಗತ ಮಾಡಿಕೊಂಡಿರುವ ದಿವಾಕರ್, ಈ ಹಿಂದೆ ಶ್ರೀ ರಾಘವೇಂದ್ರ ಸ್ವಾಮಿ, ಈಶ್ವರ ದೇವರು, ಶ್ರೀಕೃಷ್ಣ ವೇಷ ಹೀಗೆ ಹಲವು ದೇವರ ವೇಷಗಳನ್ನು ಹಾಕುತ್ತಿದ್ದರು.

ಆದರೆ, ಆ ಬಳಿಕ ಧಾರ್ಮಿಕ ವೇಷಗಳನ್ನು ಹಾಕಲು ಸರ್ಕಾರ ನಿಷೇಧ ಹೇರಿದ ಹಿನ್ನೆಲೆಯಲ್ಲಿ ವೇಷ ಹಾಕುವುದನ್ನೇ ಕೈ ಬಿಟ್ಟಿದ್ದ ದಿವಾಕರ್ ಅವರಿಗೆ ಕೈಕಾಲು ಅಲುಗಾಡದಂತಹ ಸ್ಥಿತಿ ನಿರ್ಮಾಣವಾಗಿತ್ತಂತೆ! ನಂತರ ನವರಾತ್ರಿಗೆ ಯಾವುದಾದರೂ ವೇಷ ಹಾಕಬೇಕೆಂದು ತೀರ್ಮಾನಿಸಿದ ಅವರು ಈಗ "ಪ್ರೇತ"ವಾಗಿ ಅಲೆದಾಡುತ್ತಿದ್ದಾರೆ.

Edited By : Somashekar
Kshetra Samachara

Kshetra Samachara

04/10/2022 12:21 pm

Cinque Terre

4.29 K

Cinque Terre

1

ಸಂಬಂಧಿತ ಸುದ್ದಿ