ಕಾರ್ಕಳ: ವರ್ಷಗಳು ಕಳೆದಂತೆ ಬೇಸಾಯ ಮಾಡುವವರ ಸಂಖ್ಯೆ ಕಡಿಮೆಯಾಗುತಿದ್ದಂತೆ ನವರಾತ್ರಿ ಸಂದರ್ಭದಲ್ಲಿ ಕೊರಳ ಹಬ್ಬದ ಆಚರಣೆಗೂ ತೊಡಕಾಗುತ್ತಿದೆ. ಹಿಂದೆಲ್ಲ ಮನೆ ಅಥವಾ ಅಕ್ಕಪಕ್ಕದ ಮನೆಯವರ ಗದ್ದೆಯಿಂದ ಕೊರಳು ತಂದು ಹಬ್ಬವನ್ನು ಆಚರಿಸುವುದು ಸಾಮಾನ್ಯವಾಗಿತ್ತು, ಆದರೆ ಇತ್ತೀಚೆಗೆ ಬೇಸಾಯ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವ ಕಾರಣ ಮತ್ತು ಈ ವರ್ಷ ಹಬ್ಬ ಬೇಗ ಬಂದ ಕಾರಣ ಕೊರಳು ಸಿಗುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಕಾರ್ಕಳ ಸಾಣೂರಿನ ಲೋರೆನ್ಸ್ ವಾಝ್ ತಮ್ಮ ಗದ್ದೆಯಲ್ಲಿ ಬೆಳೆದ ಕೊರಳನ್ನು ದೇವಸ್ಥಾನ ಮತ್ತು ಗರಡಿಗಳಿಗೆ ನೀಡಿ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.
ಕೆಲವು ವರ್ಷಗಳಿಂದ ನಾನು ಕೊರಳನ್ನು ನೀಡುತ್ತಾ ಬಂದಿದ್ದೇನೆ. ಆದರೆ ಈ ವರ್ಷ ಅತೀ ಹೆಚ್ಚು, ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ವೇಣುಗೋಪಾಲ ದೇವಸ್ಥಾನ ಹೀಗೆ ಸುಮಾರು 8 ದೇವಸ್ಥಾನ 2 ಗರಡಿ ಮತ್ತು 100 ಕ್ಕೂ ಹೆಚ್ಚು ಮನೆಯವರು ಕೊರಳನ್ನು ಪಡೆದುಕೊಂಡು ಹೋಗಿದ್ದಾರೆ. ಇದೊಂದು ದೇವರ ಕೆಲಸ. ಹಾಗಾಗಿ ಕೊರಳನ್ನು ನೀಡಲು ನನಗೆ ತುಂಬಾ ಖುಷಿ ಮತ್ತು ಹೆಮ್ಮೆಯಾಗುತ್ತದೆ. ಮುಂದೆಯೂ ನೀಡುತ್ತೇನೆ ಎನ್ನುತ್ತಾರೆ ಲಾರೆನ್ಸ್.
PublicNext
02/10/2022 02:11 pm