ಸುರತ್ಕಲ್: ಇಲ್ಲಿಗೆ ಸಮೀಪದ ಸೂರಜ್ ಹೋಟೆಲ್ ಬಳಿ ನಿನ್ನೆ ಸಂಜೆಯ ಸಮಯದಲ್ಲಿ ಪಕ್ಷಿಕೆರೆಯ ದಯಾನಂದ ಶೆಟ್ಡಿಗಾರ್ ಎಂಬವರ ಜಾಗದ ಮೂಲ ಪತ್ರ ಮತ್ತು ಇನ್ನಿತರ ದಾಖಲೆ ಪತ್ರಗಳು ಜಯಕರ್ನಾಟಕ ಆಟೋ ಚಾಲಕ ಮಾಲಕ ಸಂಘದ ಮಾಜೀ ಅಧ್ಯಕ್ಷ ಶೇಖರ ಶೆಟ್ಟಿಯವರಿಗೆ ದೊರೆತಿದೆ.
ಈ ಸಂದರ್ಭ ಕಾರ್ಯ ಪ್ರವೃತ್ತರಾದ ಅವರು ವಾರಸುದಾರರನ್ನು ರಾತ್ರಿಯೇ ಸಂಪರ್ಕಿಸಿ ಮರುದಿನ ಬೆಳಿಗ್ಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.ಈ ಹಿಂದೆಯೂ ಶೇಖರ ಶೆಟ್ಟಿ ಯವರು ನಗದು ಒಡವೆಗಳನ್ನು ಹಿಂದಿರುಗಿಸಿದ್ದ ಉದಾಹರಣೆಯೂ ಇವೆ.ಒಟ್ಟಿನಲ್ಲಿ ಕಾರ್ಯಕ್ಕೆ ಸಾರ್ವಜನಿಕವಾಗಿ ಶ್ಲಾಘನೀಯ ವ್ಯಕ್ತವಾಗಿದೆ.
Kshetra Samachara
30/09/2022 07:41 pm