ಉಡುಪಿ: ಮೊಬೈಲನ್ನು ನಮ್ಮ ಗುಲಾಮನಂತೆ ಬಳಸಬೇಕೇ ಹೊರತು ನಾವು ಮೊಬೈಲ್ ನ ಗುಲಾಮನಾಗಬಾರದು, ದುರ್ಬಳಕೆಗೆ ಬಲಿಯಾಗಬಾರದು ಎಂದು ಮಣಿಪಾಲ ಕೆಎಂಸಿ ಮೂಳೆ ಚಿಕಿತ್ಸಾ ವಿಭಾಗ ಪ್ರಾಧ್ಯಾಪಕ ಡಾ. ಕಿರಣ್ ಆಚಾರ್ಯ ಹೇಳಿದ್ದಾರೆ.
ಅವರು ಚಾಣಕ್ಯ ಪ್ರಕಾಶನದ ವತಿಯಿಂದ ಡಾ. ಪಿ. ವಿ. ಭಂಡಾರಿ, ಸೌಜನ್ಯಾ ಶೆಟ್ಟಿ, ವಿದ್ಯಾಶ್ರೀ ಎಂ. ಎಸ್. ರಚಿತ ಮೊಬೈಲ್ ಫೋನ್ ಎಫೆಕ್ಟ್: ನೀವೆಷ್ಟು ಸ್ಮಾರ್ಟ್?
ಕೃತಿಯನ್ನು ದೊಡ್ಡಣಗುಡ್ಡೆಯ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಸಭಾಂಗಣದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
ಪುಸ್ತಕ ಬಿಡುಗಡೆಗೆ ಮೊದಲು ವ್ಯಕ್ತಿಯೊಬ್ಬ ಮೂರು ಮೊಬೈಲ್ ಹಿಡಿದು ಶೇರ್ ಟ್ರೇಡಿಂಗ್ ವ್ಯವಹಾರದ ಬಗ್ಗೆ ಮಾತನಾಡುತ್ತಾ ವೇದಿಕೆ ಬಳಿ ಬಂದ. ಮತ್ತೊಬ್ಬ ಪಬ್ಜಿ ಆಟದ ಹುಚ್ಚು ಹಿಡಿದವ ಖಾಲಿಯಾದ ಡಾಟಾಕ್ಕಾಗಿ ಎಲ್ಲರಲ್ಲಿ ಬೇಡಿದ, ಸೆಲ್ಪಿ ರಾಣಿಯಂತೂ ಕೂತಲ್ಲಿ, ನಿಂತಲ್ಲಿ ಎಲ್ಲರ ಜತೆ ಫೋಟೋ ತೆಗೆಸಿದರೆ, ಮತ್ತೊಬ್ಬರು ಮೊಬೈಲ್ ನಲ್ಲಿ ಬರುವ ಶೇ. 50 ಡಿಸ್ಕೌಂಟ್/ಆಫರ್ ಗೆ ದಾಸಿಯಾಗಿದ್ದರು. ಬಾಳಿಗಾ ಆಸ್ಪತ್ರೆಗೆ ದಾರಿ ಕೇಳುತ್ತಾ ಬಂದ ಸ್ಮಾರ್ಟಲ್ಲದ ವ್ಯಕ್ತಿಗೆ ಯಾರೂ ದಾರಿ ತೋರಲಿಲ್ಲ. ಕೊನೆಗೆ ವೈದ್ಯರೇ ಕೃತಿ ಬಿಡುಗಡೆ ಕಾರ್ಯಕ್ರಮದ ಬಗ್ಗೆ ತಿಳಿಹೇಳಿ ಮೊಬೈಲ್ ಎಫೆಕ್ಟ್ ಮಾಹಿತಿ ಪಡಕೊಳ್ಳಲು ಸಲಹೆ ನೀಡಿದರು. ನೆರೆದವರು ಈ ಆಕರ್ಷಕ ಸ್ಕಿಟ್ ಗೆ ಜೋರಾದ ಚಪ್ಪಾಳೆ ತಟ್ಟಿದರು.
Kshetra Samachara
25/09/2022 12:30 pm