ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: ಯುವ ಜನಾಂಗ ಜಾಗೃತರಾಗಿ ಮಾದಕ ದ್ರವ್ಯ ವ್ಯಸನದಿಂದ ಹೊರಬರಬೇಕು

ಮುಲ್ಕಿ: ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರ, ಮಂಗಳೂರು ವಕೀಲರ ಸಂಘ, ಮುಲ್ಕಿ ವಲಯ ಪತ್ರಕರ್ತರ ಸಂಘ ಮತ್ತು ಭಾರತದ ಕ್ರ್ಯೆಸ್ತ ಚರ್ಚುಗಳ ಒಕ್ಕೂಟ ಸಹಯೋಗದಲ್ಲಿ ಹಳೆಯಂಗಡಿಯ ಕುಬಲಗುಡ್ಡೆಯ ಇಂಡಿಯನ್ ಯೋಗ ಮಂದಿರದಲ್ಲಿ "ಮಾದಕ ದ್ರವ್ಯ ವ್ಯಸನ ವಿರೋಧಿ ದಿನ ಹಾಗೂ ಕಾನೂನು ಮಾಹಿತಿ ಶಿಬಿರ" ನಡೆಯಿತು.

ಶಿಬಿರವನ್ನು ಹಿರಿಯ ಸಿವಿಲ್ ನ್ಯಾಯಧೀಶೆ ಶೋಭಾ ಬಿ.ಜೆ. ಉದ್ಘಾಟಿಸಿ ಮಾತನಾಡಿ ಮಾದಕ ದ್ರವ್ಯಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಜೊತೆಗೆ ಮಾನಸಿಕ ಖಿನ್ನತೆ ಒಳಪಡುತ್ತಿದ್ದು ಜನರಲ್ಲಿ ಅರಿವು ಮೂಡಿಸಿ ದುಶ್ಚಟಗಳ ಬಗ್ಗೆ ತಿಳುವಳಿಕೆ ನೀಡಬೇಕಾಗಿದೆ. ಯುವ ಜನಾಂಗ ಜಾಗೃತರಾಗಿ ಮಾದಕ ದ್ರವ್ಯ ವ್ಯಸನ ವಿರೋಧಿ ಅರಿವು ಮೂಡಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತದ ಕ್ರೈಸ್ತ ಚರ್ಚ್ ಗಳ ಒಕ್ಕೂಟದ ಅಧ್ಯಕ್ಷರಾದ ಡೇನಿಯಲ್ ದೇವರಾಜ್ ವಹಿಸಿದ್ದರು. ಮುಲ್ಕಿ ಠಾಣಾ ಇನ್ಸ್‌ಪೆಕ್ಟರ್ ಕುಸುಮಾಧರ್ ಮತ್ತಿತರರು ಮಾದಕ ದ್ರವ್ಯ ವಿರೋಧದ ಬಗ್ಗೆ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು.

Edited By : Somashekar
Kshetra Samachara

Kshetra Samachara

15/09/2022 04:50 pm

Cinque Terre

9.65 K

Cinque Terre

0

ಸಂಬಂಧಿತ ಸುದ್ದಿ