ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕ್ಯಾಂಪ್ಕೋ ಸದಸ್ಯರಿಂದ ಅನಾರೋಗ್ಯ ವ್ಯಕ್ತಿಗೆ ನೆರವಿನ ಚೆಕ್ ವಿತರಣೆ

ಬ್ರಹ್ಮಾವರ : ಕ್ಯಾಂಪ್ಕೋ ನಿಯಮಿತ ಮಂಗಳೂರು ಇದರ ವತಿಯಿಂದ ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ ಯೋಜನೆಯಡಿಯಲ್ಲಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರ ಕಾರ್ಯಕ್ರಮ ಮಂಗಳವಾರ ಜರುಗಿತು.

ಹೆಬ್ರಿ ಶಾಖೆಯ ವತಿಯಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರ ಬಳಿಯ ಆರೂರು ಗ್ರಾಮದ ಕ್ಯಾಂಪ್ಕೋ ಸದಸ್ಯ ವಿಕ್ಟರ್ ಡೇಸ ಇವರು ಅಂಜಿಯೋಪ್ಲಾಸ್ಟಿ ಚಿಕಿತ್ಸೆಗಾಗಿ ಕ್ಯಾಂಪ್ಕೋ ವತಿಯಿಂದ ನೀಡಲಾದ ರೂ. 50,000/- ಚೆಕ್ ನ್ನು ಸಂಸ್ಥೆಯ ನಿರ್ದೇಶಕರಾದ ದಯಾನಂದ ಹೆಗ್ಡೆ ಯವರು ಸದಸ್ಯರ ಮನೆಯಲ್ಲಿ ಹಸ್ತಾಂತರಿಸಿದರು. ಸಂಸ್ಥೆಯ ಬೈಕಂಪಾಡಿ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರ ಎಂ, ಮತ್ತು ಹೆಬ್ರಿ ಶಾಖಾಧಿಕಾರಿ ರಮೇಶ್ ಡಿ, ಉಪಸ್ಥಿತರಿದ್ದರು.

Edited By : Abhishek Kamoji
Kshetra Samachara

Kshetra Samachara

14/09/2022 06:25 pm

Cinque Terre

3.75 K

Cinque Terre

0

ಸಂಬಂಧಿತ ಸುದ್ದಿ