ಮೂಡುಬಿದಿರೆ: ಅಪರೂಪದ ಮಾರಕ ಕಾಯಿಲೆಯಿಂದ ಬಳಲುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬನ್ನೂರು ಗ್ರಾಮದ ಜಕ್ಕಿನಕ್ಕಿ ನಿವಾಸಿ ಸುಧಾಕರ ಹಾಗೂ ಮಂಜುಳಾ ದಂಪತಿಯ ಪುತ್ರಿ ಅಕ್ಷತಾ ಪೂಜಾರಿ ಇವರು ಅಪರೂಪದ ಕಾಯಿಲೆಯಾದ ಸ್ಕಾಲ್ ಬೋನ್ ಟ್ಯೂಮರ್ ಎಂಬ ಭಯಾನಕ ಕಾಯಿಲೆಯಿಂದ ಬಳಲುತ್ತಿದ್ದು,
ಮುಂದಿನ ಚಿಕಿತ್ಸೆಗಾಗಿ ರೇಡಿಯೇಶನ್ ಥೆರಪಿ ಮಾಡಬೇಕೆಂದು ವೈದ್ಯರು ಸೂಚಿಸಿದ್ದು, ಆದರೆ ಇವರ ಕುಟುಂಬವು ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಇದುವರೆಗೂ ಕುಟುಂಬವು ಅವರ ಕಾಯಿಲೆ ನಿವಾರಣೆಗಾಗಿ ಅಂದಾಜು 9 ಲಕ್ಷ ರೂ ಗಳಷ್ಟು ಖರ್ಚು ಮಾಡಿ ಕುಟುಂಬವು ಮುಂದಿನ ಚಿಕಿತ್ಸೆಗೆ ವೆಚ್ಚವನ್ನು ಭರಿಸಲಾಗದೇ ಕಂಗಲಾಗಿದೆ.
ಆದ್ದರಿಂದ ಈ ಕಾಯಿಲೆ ಗುಣಮುಖವಾಗಬೇಕಾದರೆ ವೈದ್ಯರು ತಿಳಿಸಿರುವಂತೆ ಇನ್ನೂ ಮುಂದಿನ ಹಂತದ ಚಿಕಿತ್ಸೆಗಾಗಿ 5 ಲಕ್ಷ ವೆಚ್ಚ ತಗುಲಲಿದೆ ಎಂದು ತಿಳಿಸಿರುವುದರಿಂದ, ಈ ಕುಟುಂಬವು ಈಗಾಗಲೇ ಸಾಕಷ್ಟು ಸಾಲಗಳನ್ನು ಮಾಡಿ ಚಿಕಿತ್ಸೆಯನ್ನು ನೀಡುತ್ತಾ ಬಂದಿದೆ. ಇನ್ನೂ ತಗಲುವ ವೆಚ್ಚವನ್ನು ಕುಟುಂಬಕ್ಕೆ ಭರಿಸಲು ಅಸಾಧ್ಯವಾಗಿರುವುದರಿಂದ ಈ ಕುಟುಂಬವು ದಾನಿಗಳ ಸಹಾಯಹಸ್ತವನ್ನು ಬೇಡುತ್ತಿದ್ದಾರೆ.
ಈ ಬಡ ಕುಟುಂಬಕ್ಕೆ ಸಹೃದಯಿ ದಾನಿಗಳು ತಮ್ಮಿಂದಾದಷ್ಟು ಮೊತ್ತವನ್ನು ಕೆನರಾ ಬ್ಯಾಂಕ್‌ನ ಖಾತೆ ಸಂಖ್ಯೆ: 5391108000476 ಬನ್ನೂರು ಬ್ರಾಂಚ್, IFSC CODE:CNRB0005391 ಅಥವಾ ಗೂಗಲ್ ಪೇ ಸಂಖ್ಯೆ: 9480268616 ಇದಕ್ಕೆ ಸಹಾಯಧನವನ್ನು ಮಾಡಿ ಈ ಬಡ ಹುಡುಗಿಯ ಸಹಾಯಕ್ಕೆ ನೆರವಾಗುವಂತೆ ಈ ಕುಟುಂಬವು ಸಹೃದಯಿ ದಾನಿಗಳ ನಿರೀಕ್ಷೆಯಲ್ಲಿದೆ.
Kshetra Samachara
13/09/2022 04:35 pm