ಹೆಬ್ರಿ: ಕಳ್ತೂರು ಸಂತೆಕಟ್ಟೆಯ ಲೇಖಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜಸೇವಕ ಅರ್ಬೆಟ್ಟು ಜ್ಞಾನದೇವ ಕಾಮತ್ (80) ಹಾಗೂ ಅವರ ಪತ್ನಿ ಸುಲತಾ ಕಾಮತ್ (76) ಸ್ವಗೃಹದಲ್ಲಿ 24 ಗಂಟೆ ಅವಧಿಯ ಅಂತರದಲ್ಲಿ ನಿಧನರಾಗಿದ್ದಾರೆ.
ವೃದ್ಧಾಪ್ಯ ಹಾಗೂ ಅಲ್ಪಕಾಲದ ಅಸೌಖ್ಯದಿಂದ ಪತ್ನಿ ಸುಲತಾ ಕಾಮತ್ ಸೆ.9ರಂದು ಸಂಜೆ ನಿಧನರಾದರೆ, ಪತಿ ಜ್ಞಾನದೇವ ಕಾಮತ್ ಸೆ.10ರಂದು ಮಧ್ಯಾಹ್ನ ಮನೆ ಮಂದಿ ಎದುರು ಪತ್ನಿ ಚಿತೆ ಏರುವ ಮೊದಲೇ ನಿಧನರಾದರು. ನಂತರ ಹೆಬ್ರಿಯಲ್ಲಿ ಇಬ್ಬರ ಅಂತ್ಯಸಂಸ್ಕಾರ ನಡೆಸಲಾಯಿತು. ಅವರಿಗೆ ಪುತ್ರ ಹಾಗೂ ಮೂವರು ಪುತ್ರಿಯರು ಇದ್ದಾರೆ.
2005ರಲ್ಲಿ ಸಮಾಜಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಪಡೆದ ಜ್ಞಾನದೇವ ಕಾಮತ್ ಅವರು ತಮ್ಮ ಇಳಿ ವಯಸ್ಸಿನಲ್ಲಿ 'ಬಾಳು ತೊರೆದಾಗ' ಕೃತಿ ರಚಿಸಿದ್ದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿದ್ದರು. ಪತ್ರಿಕಾ ವಿತರಕ, ಹವ್ಯಾಸಿ ಪತ್ರಕರ್ತ, ಲೇಖಕರಾಗಿದ್ದ ಅವರು ನಾನಾ ಶಾಲೆಗಳಿಗೆ ತೆರಳಿ ಪುಸ್ತಕ ದಾನ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದರು.
PublicNext
12/09/2022 10:50 am